Sunday, 10th November 2024

ಮೋದಿಯ ಯೋಜನೆಗಳು ಘೋಷಣೆಗೆ ಸೀಮಿತ, ಜಾರಿಯಾಗಲ್ಲ: ಕಾಂಗ್ರೆಸ್ ಆರೋಪ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸ್ವಾತಂತ್ರ್ಯೋತ್ಸವ ಭಾಷಣಗಳಲ್ಲಿ ಕೇವಲ ಯೋಜನೆಗಳ ಬಗ್ಗೆ ಘೋಷಣೆಗಳನ್ನು ಮಾಡಿದರು ಮತ್ತು ಅವುಗಳನ್ನು ಜಾರಿಗೊಳಿಸಿಲ್ಲ, ರೈತರು ಪ್ರತಿಭಟನೆ ಮಾಡುತ್ತಿರುವ ಮೂರು ಕೃಷಿ ಕಾನೂನುಗಳನ್ನು ಹಿಂಪಡೆ ಯಲಿಲ್ಲ ಎಂದು ಕಾಂಗ್ರೆಸ್ ಭಾನುವಾರ ಆರೋಪಿಸಿದೆ.

ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ‘ ಏಳು ವರ್ಷಗಳಿಂದ ದೇಶವು ಪ್ರಧಾನ ಮಂತ್ರಿಯವರ ‘ಅದೇ ಭಾಷಣಗಳನ್ನು’ ಕೇಳುತ್ತಿದೆ. ಆದರೆ ಯಾವುದೇ ನೊಂದ ವಿಭಾಗಕ್ಕೆ ಏನೂ ಮಾಡಲಾಗು ತ್ತಿಲ್ಲ. ಅವರು ಹೊಸ ಯೋಜನೆಗಳನ್ನು ಘೋಷಿಸುತ್ತಾರೆ. ಆದರೆ ಎಂದಿಗೂ ಕಾರ್ಯಗತಗೊಳಿಸುವು ದಿಲ್ಲ ಅಥವಾ ನೆಲದಲ್ಲಿ ನೋಡಲಾಗುವುದಿಲ್ಲ.’ ಎಂದರು. ಮೂರು ಹೊಸ ಕೃಷಿ ಕಾನೂನುಗಳನ್ನು ತರುವ ಮೂಲಕ, ಅವರು ರೈತರಿಗೆ ವಿನಾಶವನ್ನು ತಂದಿದ್ದಾರೆ ‘ಎಂದು ತಿಳಿಸಿದರು.

ಕೆಂಪು ಕೋಟೆಯ ಮೇಲೆ ಕಾಂಗ್ರೆಸ್ ಅನ್ನು ಮತ್ತೆ ಮತ್ತೆ ಟೀಕಿಸುವ ಮೂಲಕ ದೇಶವು ಪ್ರಗತಿಯಾಗುವುದಿಲ್ಲ ಎಂದು ಹೇಳಿದರು.’ಕಾಂಗ್ರೆಸ್ ತನ್ನ ಆಡಳಿತಾವಧಿ ಯಲ್ಲಿ ರೈತರಿಗಾಗಿ ನೀರಾವರಿ ವ್ಯವಸ್ಥೆಯನ್ನು ಒದಗಿಸು ವಂತಹ ಅನೇಕ ಕೆಲಸಗಳನ್ನು ಮಾಡಿದೆ. ಯುಪಿಎ ಅಧಿಕಾರದಲ್ಲಿದ್ದಾಗ ಮನಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧಿ ಅವರು ರೈತರ ಸಾಲವನ್ನು ಮನ್ನಾ ಮಾಡಿದರು’ ಎಂದು ಹೇಳಿದರು.

ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ ಅವರು ಎರಡು ವರ್ಷಗಳ ಹಿಂದೆ ಇದೇ ರೀತಿ ಎಂದು ಹೇಳುತ್ತಾ ಮೂಲಸೌಕರ್ಯ ವಲಯದಲ್ಲಿ 100 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆಯ ಘೋಷಣೆಯ ಕುರಿತು ಪ್ರಧಾನಿಯವರ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ನಾಯಕ ಪ್ರತಾಪ್ ಸಿಂಹ ಬಾಜ್ವಾ, ಪ್ರಧಾನ ಮಂತ್ರಿ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವುದಾಗಿ ಘೋಷಿಸಿದ್ದರೆ ಅದು ಐತಿಹಾಸಿಕ ದಿನವಾಗುತ್ತಿತ್ತು ಎಂದರು.