Thursday, 19th September 2024

Physical Abuse: ಅತ್ಯಾಚಾರ ತಡೆಯಲು ಬಂದಿದೆ ಆ್ಯಂಟಿ ರೇಪ್‌ ಕಾಂಡೋಮ್‌, ಬಲಾತ್ಕಾರಕ್ಕಿಳಿದ ಪುರುಷನ ಕತೆ ಅಷ್ಟೇ!

anti rape condom

ನ್ಯೂಯಾರ್ಕ್‌: ಕೋಲ್ಕತ್ತಾದ ಟ್ರೈನಿ ವೈದ್ಯೆಯ ಮೇಲೆ ನಡೆದ ಅತ್ಯಾಚಾರ (Physical Abuse) ಹಾಗೂ ಕೊಲೆ ಪ್ರಕರಣ (Murder case) ದೇಶವನ್ನೇ ಬೆಚ್ಚಿ ಬೀಳಿಸಿದೆ. ಮಹಿಳೆಯರ ಸುರಕ್ಷತೆಯ ಬಗ್ಗೆ ಪ್ರಶ್ನೆಗಳೆದ್ದಿವೆ. ದೆಹಲಿ, ರಾಜಸ್ಥಾನ, ಉತ್ತರ ಪ್ರದೇಶ, ಜಾರ್ಖಂಡ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಬರ್ಬರ ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿವೆ. ಈ ಅತ್ಯಾಚಾರಿ ಪುರುಷರನ್ನು ಸ್ಥಳದಲ್ಲೇ ತಡೆಯಲು, ಅಲ್ಲೇ ಶಿಕ್ಷೆಯಾಗುವಂತೆ ಮಾಡಲು ಸಾಧ್ಯವಿಲ್ಲವೇ?

ಇದೆ ಅನ್ನುತ್ತದೆ ಹೊಸ ಆವಿಷ್ಕಾರ. ಈ ಸಮಸ್ಯೆಗೆ ವೈದ್ಯೆಯೊಬ್ಬರು ಉತ್ತಮ ಪರಿಹಾರ ಕಂಡುಕೊಂಡಿದ್ದಾರೆ. ಇದನ್ನು ಹೆಣ್ಣು ಬಳಸಿದರೆ ಅತ್ಯಾಚಾರಿಗಳು ಸುರಕ್ಷಿತವಾಗಿರುವುದು ಕಷ್ಟ.

ವರದಿಯ ಪ್ರಕಾರ, ಅತ್ಯಾಚಾರ ವಿರೋಧಿ ಸಾಧನವನ್ನು ಆವಿಷ್ಕರಿಸಿದವರು ಆಫ್ರಿಕಾದ ವೈದ್ಯೆ ಡಾ. ಸೋನೆಟ್ ಎಹ್ಲರ್ಸ್. ಹಲವು ವರ್ಷಗಳ ಸಂಶೋಧನೆಯ ನಂತರ ಈ ಸಾಧನವನ್ನು ರಚಿಸಿದ್ದಾರೆ. ಅತ್ಯಾಚಾರ ಸಂತ್ರಸ್ತೆಯೊಬ್ಬಳ ಪ್ರಕರಣ ಆಕೆಗೆ ಬಂದಾಗ ಆಕೆಯ ಸ್ಥಿತಿ ನೋಡಿ ಸೋನೆಟ್‌ ತುಂಬಾ ನೊಂದುಕೊಂಡಳು. ಅತ್ಯಾಚಾರ ಸಂತ್ರಸ್ತೆಯನ್ನು ಕ್ರೂರವಾಗಿ ನಡೆಸಿಕೊಳ್ಳಲಾಗಿತ್ತು. ಅವಳು ಸರಿಯಾಗಿ ಉಸಿರಾಡಲು ಸಹ ಸಾಧ್ಯವಿರಲಿಲ್ಲ ಮತ್ತು ನಿರ್ಜೀವ ಶವದಂತಿದ್ದಳು. ಈ ಪ್ರಕರಣದಿಂದಲೇ ಡಾ. ಸಾನೆಟ್ ಎಹ್ಲರ್ಸ್ ಈ ಸಾಧನವನ್ನು ತಯಾರಿಸುವ ಪ್ರೇರಣೆ ಪಡೆದರು.

ಈ ಅತ್ಯಾಚಾರ-ವಿರೋಧಿ ಸಾಧನಕ್ಕೆ Rape-aXe ಎಂದು ಹೆಸರಿಸಲಾಗಿದೆ. ಇದು ಕಾಂಡೋಮ್‌ನಂತೆಯೇ ಇದೆ. ಆದರೆ ಅದರೊಳಗೆ ಚೂಪಾದ ಮುಳ್ಳಿನ ಕೊಕ್ಕೆಗಳಿವೆ. ಒಬ್ಬ ಪುರುಷನು ಅತ್ಯಾಚಾರಕ್ಕೆ ಪ್ರಯತ್ನಿಸಿದಾಗ ಮಹಿಳೆಯರು ಅದನ್ನು ಬಳಸಬಹುದು. ಆಗ ಈ ಕಾಂಡೋಮ್ ನ ಮುಳ್ಳುಗಳಲ್ಲಿ ಆತನ ಖಾಸಗಿ ಅಂಗ ಸಿಲುಕಿ ನೋವಿನಿಂದ ಚೀರಾಡುತ್ತಾನೆ. ಅಂದರೆ ಇದನ್ನು ಮಹಿಳೆ ಅಪಾಯದ ಸನ್ನಿವೇಶಗಳಲ್ಲಿ ಧರಿಸಿರಬೇಕು.

ಸೊನೆಟ್ ಎಹ್ಲರ್ಸ್ ಪ್ರಕಾರ, ಇದು ನೋವುಂಟುಮಾಡುತ್ತದೆ, ಈ ಕಾಂಡೋಮ್‌ಗೆ ಆರೋಪಿಯ ಖಾಸಗಿ ಅಂಗ ಸಿಕ್ಕಿಹಾಕಿಕೊಂಡಾಗ, ಆರೋಪಿಯು ಮೂತ್ರ ವಿಸರ್ಜಿಸಲು ಸಾಧ್ಯವಿಲ್ಲ ಅಥವಾ ಅವನು ನಡೆಯಲೂ ಸಾಧ್ಯವಿಲ್ಲ. ಅವನು ಅದನ್ನು ತೆಗೆದುಹಾಕಲು ಪ್ರಯತ್ನಿಸಿದರೂ, ಕಾಂಡೋಮ್ ಗಟ್ಟಿಯಾಗಿ ಅಂಟಿಕೊಳ್ಳುವುದರಿಂದ ಅವನು ತೊಂದರೆ ಎದುರಿಸಬೇಕಾಗುತ್ತದೆ. ಈ ಸಾಧನವು ವ್ಯಕ್ತಿಯ ಖಾಸಗಿ ಭಾಗಗಳಿಗೆ ಹೆಚ್ಚಿನ ಹಾನಿಯನ್ನುಂಟು ಮಾಡುವುದಿಲ್ಲ, ಆದರೆ ಕೆಲವು ದಿನಗಳ ನಂತರ ನೋವು ಗುಣವಾಗುತ್ತದೆ. ಈ ಮೂಲಕ ಮಹಿಳೆಯರು ಅತ್ಯಾಚಾರದಂತಹ ದೌರ್ಜನ್ಯಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ ಈ ಸಾಧನವನ್ನು ಆಂಟಿ ರೇಪ್ ಡಿವೈಸ್ ಎಂದೂ ಕರೆಯಲಾಗುತ್ತಿದೆ.