Friday, 22nd November 2024

Anti-Terror Op : ‘ತೆಹ್ರೀಕ್ ಲಬೈಕ್ ಯಾ ಮುಸ್ಲಿಂ’ ಉಗ್ರರ ಗುಂಪನ್ನು ಮೂಲದಿಂದಲೇ ನಾಶಪಡಿಸಿದ ಭದ್ರತಾ ಪಡೆ

Anti-Terror Op

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಹಲವಾರು ಜಿಲ್ಲೆಗಳಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸುತ್ತಿದ್ದು ತೆಹ್ರೀಕ್ ಲಬೈಕ್ ಯಾ ಮುಸ್ಲಿಂ (ಟಿಎಲ್ಎಂ) ಎಂಬ ಭಯೋತ್ಪಾದಕ ಗುಂಪನ್ನು ಇಂದು ನಾಶಪಡಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರ ಕೌಂಟರ್-ಇಂಟೆಲಿಜೆನ್ಸ್ ಕಾಶ್ಮೀರ (ಸಿಐಕೆ) ವಿಭಾಗ ಕಾರ್ಯಾಚರಣೆ ನಡೆಸಿ (Anti-Terror Op) ಉಗ್ರರ ಗುಂಪನ್ನು ನಾಶ ಮಾಡಿದೆ. ಟಿಎಲ್ಎಂ ಲಷ್ಕರ್-ಎ-ತೈಬಾದ (ಎಲ್ಇಟಿ) ಸ್ಥಳೀಯ ಶಾಖೆಯ ರೂಪದಲ್ಲಿ ರಚನೆಯಾಗಿತ್ತು. ಇದನ್ನು ಪಾಕಿಸ್ತಾನದ ಹ್ಯಾಂಡ್ಲರ್ ಮೂಲಕ ನಿರ್ವಹಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಶ್ರೀನಗರ, ಗಂದರ್‌ಬಾಳ್‌ ಬಂಡಿಪೋರಾ, ಕುಲ್ಗಾಮ್, ಬುಡ್ಗಾಮ್, ಅನಂತ್‌ನಾಗ್‌ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿ ಈ ಗುಂಪು ಸಕ್ರಿಯವಾಗಿತ್ತು. ಉಗ್ರಗಾಮಿ ಚಟುವಟಿಕೆಗಳಿಗೆ ಯುವಕರನ್ನು ಸಜ್ಜುಗೊಳಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಹೀಗಾಗಿ ಟಿಎಲ್ಎಂನೊಳಗಿನ ನೇಮಕ ಮಾಡ್ಯೂಲ್ ಅನ್ನು ತಟಸ್ಥಗೊಳಿಸಲಾಗಿದೆ. ಯುವಕರನ್ನು ಹಾದಿ ತಪ್ಪಿಸುವ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ.

ಇದನ್ನೂ ಓದಿ: Brics Summit: 16ನೇ ಬ್ರಿಕ್ಸ್‌ ಶೃಂಗಸಭೆ; ರಷ್ಯಾಗೆ ಮೋದಿ ಪ್ರಯಾಣ- ಪುಟಿನ್‌ ಜತೆ ಮಹತ್ವದ ಮಾತುಕತೆ ಸಾಧ್ಯತೆ

ಗಂದರ್‌ಬಾಲ್‌ ಜಿಲ್ಲೆಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಏಳು ಜನರು ಸಾವನ್ನಪ್ಪಿದ ನಂತರ ಈ ಕಾರ್ಯಾಚರಣೆ ನಡೆದಿದೆ. ಈ ಉಗ್ರರ ದಾಳಿಯಲ್ಲಿ ಬಂಡಿಪೋರಾ ಪ್ರದೇಶದದ ಮೂಲಕ ನುಸುಳಿದ್ದ ಉಗ್ರರು ಅಮಾಯಕರನ್ನು ಹತ್ಯೆ ಮಾಡಿದ್ದರು.

ಲಷ್ಕರ್ ಜತೆ ಸಂಪರ್ಕ

ಟಿಎಲ್ಎಂ ಇತ್ತೀಚೆಗೆ ರೂಪುಗೊಂಡ ಸಂಘಟನೆಯಾಗಿದ್ದರೂ, ಈ ಪ್ರದೇಶದಲ್ಲಿ ಸಕ್ರಿಯ ಭಯೋತ್ಪಾದಕ ಗುಂಪುಗಳಲ್ಲಿ ಒಂದಾದ ಲಷ್ಕರ್-ಎ-ತೈಬಾದೊಂದಿಗೆ ಸೈದ್ಧಾಂತಿಕ ಮತ್ತು ವ್ಯವಸ್ಥಾಪನಾ ಸಂಪರ್ಕ ಹೊಂದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಬಹುರಾಷ್ಟ್ರೀಯ ಭಯೋತ್ಪಾದಕ ಜಾಲಗಳೊಂದಿಗೆ ಸಂಬಂಧ ಹೊಂದಿರುವ ಪಾಕಿಸ್ತಾನದ ಪ್ರಸಿದ್ಧ ಹ್ಯಾಂಡ್ಲರ್ ‘ಬಾಬಾ ಹಮಾಸ್’ ಈ ಗುಂಪನ್ನು ಬೆಳೆಸುತ್ತಿದ್ದ. ಆತ ಉಗ್ರರಿಗೆ ಭಾರತಕ್ಕೆ ನುಸುಳಲು ನೆರವು, ಹಣಕಾಸು ನೇಮಕ ತಂತ್ರಗಳನ್ನು ಹೇಳಿಕೊಡುತ್ತಿದ್ದಾನೆ.

ಕಾಶ್ಮೀರ ಕಣಿವೆಯಾದ್ಯಂತ ಟಿಎಲ್ಎಂನ ಜಾಲದ ಬಗ್ಗೆ ಗುಪ್ತಚರ ಮಾಹಿತಿಯ ಸುಳಿವು ನೀಡಿದ ನಂತರ ದಾಳಿಗಳನ್ನು ಪ್ರಾರಂಭಿಸಲಾಗಿತ್ತು. ಗಂಡರ್ಬಾಲ್ ದಾಳಿಯ ನಂತರ ಕಾಶ್ಮೀರ ಕಣಿವೆ ಈಗಾಗಲೇ ಉದ್ವಿಗ್ನಗೊಂಡಿದೆ. ಎಲ್ಲಾ ಪ್ರಮುಖ ನಗರ ಕೇಂದ್ರಗಳು ಮತ್ತು ಗಡಿ ಜಿಲ್ಲೆಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಚೆಕ್‌ಪೋಸ್ಟ್‌ಗಳನ್ನು ಹೆಚ್ಚಿಸಲಾಗಿದೆ .