Saturday, 14th December 2024

ಬಿಜೆಪಿಗೆ ತೃತೀಯ, ನಾಲ್ಕನೇ ರಂಗಗಳು ಸವಾಲಾಗದು: ಪ್ರಶಾಂತ್ ಕಿಶೋರ್

ಮುಂಬೈ: ಮುಂಬರುವ ಚುನಾವಣೆಗಳಲ್ಲಿ ಭಾರತೀಯ ಜನತಾ ಪಕ್ಷಕ್ಕೆ ತೃತೀಯ ಅಥವಾ ನಾಲ್ಕನೇ ರಂಗಗಳು ಸವಾಲಾಗದು ಎಂದು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ಲೋಕಸಭಾ ಚುನಾವಣೆ ವಿಚಾರವಾಗಿ ಸಂದರ್ಶನ ನೀಡಿರುವ ಕಿಶೋರ್, ಮುಂದಿನ ಲೋಕಸಭಾ ಚುನಾವಣೆಯಲ್ಲಿ ತೃತೀಯ ಅಥವಾ ನಾಲ್ಕನೇ ರಂಗವು ಭಾರತೀಯ ಜನತಾ ಪಕ್ಷಕ್ಕೆ ಸವಾಲೊಡ್ಡುವ ಸಾಧ್ಯತೆ ತಳ್ಳಿಹಾಕಿದರು.

ಬಿಜೆಪಿ ವಿರುದ್ಧ ವಿರೋಧ ಪಕ್ಷಗಳು ರಾಷ್ಟ್ರೀಯ ಒಕ್ಕೂಟ ರಚಿಸಲಿವೆ ಎಂಬ ಊಹಾಪೋಹಗಳ ನಡುವೆ ಈ ಹೇಳಿಕೆ ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಬಿಜೆಪಿ ವಿರುದ್ಧ ವಿರೋಧ ಪಕ್ಷಗಳು ರಾಷ್ಟ್ರೀಯ ಒಕ್ಕೂಟವನ್ನು ರಚಿಸಲಿವೆ ಎಂಬ ಬಗ್ಗೆ ಮಾತುಗಳನ್ನು ಕೇಳಿದ್ದೇನೆ. ಆದರೆ ಬಿಜೆಪಿಗೆ ಸವಾಲೊಡ್ಡಲು ಸಾಧ್ಯ ವಾಗುತ್ತದೆ ಎಂದು ನನಗನಿಸುತ್ತಿಲ್ಲ. ಹಾಗಾಗಿ ನಾನೇಕೆ ಅಂತಹ ಯಾವುದೇ ಒಕ್ಕೂಟದ ಭಾಗವಾಗಿರಬೇಕು? ಎಂದು ಹೇಳಿದ್ದಾರೆ.