ಕೆನಡಾ: ಖ್ಯಾತ ಪಂಜಾಬಿ ಗಾಯಕ(Punjabi Singer) ಎಪಿ ಧಿಲ್ಲೋನ್(AP Dhillon) ಅವರ ಮನೆಯ ಮೇಲೆ ದುಷ್ಕರ್ಮಿಗಳು ಹಲವಾರು ಸುತ್ತು ಗುಂಡು ಹಾರಿಸುತ್ತಿರುವ(Shootout) ವೀಡಿಯೊವೊಂದು ಭಾರೀ ಸದ್ದು ಮಾಡುತ್ತಿದೆ. ಘಟನೆ ನಡೆದು ಬರೋಬ್ಬರಿ ಎರಡು ತಿಂಗಳ ನಂತರ ಎಲ್ಲೆಡೆ ವೈರಲ್ ಆಗುತ್ತಿದ್ದು, ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬನನ್ನು ಅರೆಸ್ಟ್ ಮಾಡಲಾಗಿದೆ. ಮತ್ತೊರ್ವ ದುಷ್ಕರ್ಮಿಗಾಗಿ ಪೊಲೀಸರು ಭಾರೀ ಶೋಧ ನಡೆಸಿದ್ದಾರೆ.
#BREAKING: कनाडा में पंजाबी सिंगर एपी ढिल्लो के घर के बाहर फायरिंग और 2 वाहनों को आग लगाने के मामले में कनाडा पुलिस ने एक भारतीय अभिजीत किंगरा को ontario से गिरफ्तार किया. फायरिंग की जिम्मेदारी लारेंस,गोल्डी और रोहित गोदारा गैंग ने ली थी#Canada pic.twitter.com/kjPQhy036O
— NDTV India (@ndtvindia) November 1, 2024
ಸೆಪ್ಟೆಂಬರ್ 2 ರಂದು ವ್ಯಾಂಕೋವರ್‌ನಲ್ಲಿ ನಡೆದ ಘಟನೆಯಲ್ಲಿ ಎರಡು ವಾಹನಗಳಿಗೆ ಬೆಂಕಿ ಹಚ್ಚಿರುವುದನ್ನು ಸಹ ಇದು ತೋರಿಸುತ್ತದೆ. ಶೂಟಿಂಗ್‌ನಲ್ಲಿ ಗಾಯಕನಿಗೆ ಯಾವುದೇ ರೀತಿಯ ಅಪಾಯ ಸಂಭವಿಸಿರಲಿಲ್ಲ. ಇನ್ನು ಈ ಶೂಟೌಟ್ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿದ್ದು, ಗಾಯಕ ಧಿಲ್ಲೋನ್, ಸಲ್ಮಾನ್ ಖಾನ್ ಅವರನ್ನು ಮ್ಯೂಸಿಕ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದರಿಂದ ಗುಂಡಿನ ದಾಳಿ ನಡೆಸಿದ್ದೇವೆ ಎಂದು ಹೇಳಿದ್ದ. ಸಿದ್ದು ಮೂಸ್ ವಾಲಾ ಮತ್ತು ಬಾಬಾ ಸಿದ್ದಿಕ್ ಹತ್ಯೆ ಪ್ರಕರಣದ ಹೊಣೆ ಹೊತ್ತುಕೊಂಡಿರುವ ಈ ಕುಖ್ಯಾತ ಗ್ಯಾಂಗ್ ಹಿಟ್ ಲಿಸ್ಟ್‌ನಲ್ಲಿ ದಿಲ್ಲನ್ ಕೂಡ ಇದ್ದಾರೆ.
ಫೈರಿಂಗ್ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಕೆನಡಾದ ಪೊಲೀಸರು ಒಂಟಾರಿಯೊದಿಂದ ಅಭಿಜೀತ್ ಕಿಂಗ್ರಾ (25) ಎಂಬ ಭಾರತೀಯನನ್ನು ಬಂಧಿಸಿದ್ದಾರೆ. ಮತ್ತೊರ್ವ ಆರೋಪಿ ಭಾರತೀಯ ಮೂಲಕ ವಿಕ್ರಮ್ ಶರ್ಮಾ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಗೊಳಿಸಲಾಗಿದೆ. ಕಿಂಗ್ರಾ ವಿರುದ್ಧ ಫೈರಿಂಗ್ ಮತ್ತು ಬೆಂಕಿ ಹಚ್ಚಿದ ಆರೋಪ ಹೊರಿಸಲಾಗಿದೆ ಮತ್ತು ಇಂದು ಒಂಟಾರಿಯೊ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದು ಎಂದು ಕೆನಡಾದ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮತ್ತೊರ್ವ ಆರೋಪಿ ಶರ್ಮಾ, 23 ರ ಯಾವುದೇ ಫೋಟೋ ಹೊಂದಿಲ್ಲ, ಆದರೆ ಅವನನ್ನು ದಕ್ಷಿಣ ಏಷ್ಯಾದ ಪುರುಷ, 5 ಅಡಿ 9 ಇಂಚು ಎತ್ತರದ ಕಪ್ಪು ಕೂದಲು ಮತ್ತು ಕಂದು ಕಣ್ಣುಗಳನ್ನು ಹೊಂದಿರುವ ವ್ಯಕ್ತಿ ಎಂದು ವಿವರಿಸಿದ್ದಾರೆ. ಅವರು ಪ್ರಸ್ತುತ ಭಾರತದಲ್ಲಿದ್ದಾನೆ ಎಂದು ಅವರು ಶಂಕಿಸಿದ್ದಾರೆ.
ಎಪಿ ಧಿಲ್ಲೋನ್ ಅವರು ಜನಪ್ರಿಯ ಪಂಜಾಬಿ ಹಾಡುಗಳಾದ ‘ಬ್ರೌನ್ ಮುಂಡೆ’, ‘ಎಕ್ಸ್‌ಕ್ಯೂಸಸ್’, ‘ಸಮ್ಮರ್ ಹೈ’, ‘ವಿತ್ ಯು’, ‘ದಿಲ್ ನು’ಹಾಡುಗಳಿಂದ ಜನಪ್ರಿಯರಾಗಿದ್ದಾರೆ.
ಈ ಸುದ್ದಿಯನ್ನೂ ಓದಿ: Salman Khan: ʻಸಲ್ಮಾನ್ ಖಾನ್‌ಗಿಂತ ಲಾರೆನ್ಸ್ ಬಿಷ್ಣೋಯ್ ಬೆಟರ್ʼ- ಮಾಜಿ ಪ್ರೇಯಸಿ ಬಿಚ್ಚಿಟ್ಳು ಭಾಯ್‌ಜಾನ್ ಕುರಿತ ಶಾಕಿಂಗ್ ಸಂಗತಿ