Friday, 22nd November 2024

Apple Revenue: ಭಾರತದಲ್ಲಿ ಐಫೋನ್‌ ದಾಖಲೆಯ ಸೇಲ್, ಬೆಂಗಳೂರಿನಲ್ಲಿ ಹೊಸ‌ ರಿಟೇಲ್‌ ಸ್ಟೋರ್

Apple phone

ನವದೆಹಲಿ: ಭಾರತದಲ್ಲಿ ಐಫೋನ್‌ಗಳ ದಾಖಲೆಯ ವ್ಯಾಪಾರದ ಪರಿಣಾಮ ಅಮೆರಿಕದ ಐಫೋನ್‌ (iPhone sales) ಉತ್ಪಾದಕ ದಿಗ್ಗಜ ಆ್ಯಪಲ್‌ ಕಂಪನಿಗೆ ಭರ್ಜರಿ ಲಾಭವಾಗಿದೆ. (Apple Revenue) ಹೀಗಾಗಿ ಭಾರತದ ಬೆಂಗಳೂರು ಸೇರಿದಂತೆ ಮತ್ತಷ್ಟು ನಗರಗಳಲ್ಲಿ ರಿಟೇಲ್‌ ಸ್ಟೋರ್‌ಗಳನ್ನು ತೆರೆಯಲು ಕಂಪನಿ ಉತ್ಸುಕವಾಗಿದೆ.

ಆ್ಯಪಲ್‌ ಕಂಪನಿಯ ಸಿಇಒ ಟಿಮ್‌ ಕುಕ್‌ (Tim Cook) ಅವರೇ, ಭಾರತದಲ್ಲಿ ಐಫೋನ್‌ ಸೇಲ್ಸ್‌ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೇರಿದೆ ಎಂದು ತಿಳಿಸಿದ್ದಾರೆ. ” ಭಾರತದಲ್ಲಿ ಐಫೋನ್‌ಗಳ ಗಣನೀಯ ಮಾರಾಟ ನಮ್ಮ ಕುತೂಹಲವನ್ನು, ಆಸಕ್ತಿಯನ್ನು ಹೆಚ್ಚಿಸಿದೆ. ಜುಲೈ-ಸೆಪ್ಟೆಂಬರ್‌ನಲ್ಲಿ ಕಂಪನಿಯ ಉತ್ಪನ್ನಗಳ ಮಾರಾಟ ದಾಖಲೆ ಸೃಷ್ಟಿಸಿದೆ. ಐಫೋನ್‌ 15ಕ್ಕಿಂತಲೂ ಐಫೋನ್‌ 16ರ ಸೇಲ್ಸ್‌ ಹೆಚ್ಚಿದೆʼʼ ಎಂದು ಹೂಡಿಕೆದಾರರ ಜತೆಗಿನ ಸಭೆಯಲ್ಲಿ ಟಿಮ್‌ ಕುಕ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.‌

ಜಾಗತಿಕವಾಗಿ ಆ್ಯಪಲ್‌ನ ಒಟ್ಟು ವ್ಯಾಪಾರ ನೀರೀಕ್ಷೆ ಮೀರಿ ಏರಿಕೆಯಾಗಿದೆ. 6.1% ಹೆಚ್ಚಳವಾಗಿದೆ. 9490 ಕೋಟಿ ಡಾಲರ್‌ಗೆ ಏರಿಕೆಯಾಗಿದೆ. ಮತ್ತೊಂದು ಕಡೆ ಚೀನಾದಲ್ಲಿ ಆ್ಯಪಲ್‌ ಸವಾಲುಗಳನ್ನು ಎದುರಿಸುತ್ತಿದೆ. ಅಲ್ಲಿ ಅದರ ಆದಾಯ 1500 ಕೋಟಿ ಡಾಲರ್‌ಗೆ ಇಳಿದಿದೆ. ಐಫೋನ್‌ನ ಇತ್ತೀಚಿನ ಆಪರೇಟಿಂಗ್‌ ಸಿಸ್ಟಮ್‌ನಲ್ಲಿ ಹೊಸ ಇಂಟಲಿಜೆನ್ಸ್‌ ಫೀಚರ್‌ಗಳಿದ್ದು, ಉತ್ತಮ ಸ್ಪಂದನೆ ಲಭಿಸಿದೆ ಎಂದು ಟಿಮ್‌ ಕುಕ್‌ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಹೊಸ ಆ್ಯಪಲ್‌ ಸ್ಟೋರ್:

ಶೀಘ್ರದಲ್ಲಿಯೇ 4 ಹೊಸ ರಿಟೇಲ್ ಮಳಿಗೆಗಳನ್ನು ತೆರೆಯಲಿದೆ.‌ ಬೆಂಗಳೂರು, ಪುಣೆ, ಮುಂಬಯಿ, ದಿಲ್ಲಿ-ಎನ್‌ಸಿಆರ್‌ನಲ್ಲಿ ಹೊಸ ಮಳಿಗೆಗಳು ಬರಲಿವೆ. ಪ್ರಸ್ತುತ ಮುಂಬಯಿ ಮತ್ತು ದಿಲ್ಲಿಯಲ್ಲಿ ಆ್ಯಪಲ್‌ನ ರಿಟೇಲ್‌ ಸ್ಟೋರ್‌ಗಳು ಇದೆ. ಇವೆಲ್ಲದರ ಜತೆಗೆ ಆ್ಯಪಲ್‌ನ ಐಪಾಡ್‌ಗಳ ಮಾರಾಟವೂ ಭಾರತದಲ್ಲಿ ಹೆಚ್ಚುತ್ತಿದೆ. ಎರಡಂಕಿಗಳ ಬೆಳವಣಿಗೆ ದಾಖಲಿಸಿದೆ.

ಕೌಂಟರ್‌ ರೀಸರ್ಚ್‌ ವರದಿಯ ಪ್ರಕಾರ, ಭಾರತದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಐಫೋನ್‌ ಸದ್ಯಕ್ಕೆ ಪ್ರಮಾಣದ ದೃಷ್ಟಿಯಿಂದ ಕೇವಲ 7% ಪಾಲನ್ನು ಹೊಂದಿದೆ. ಆರೆ ಮೌಲ್ಯದ ದೃಷ್ಟಿಯಿಂದ 23% ಹೊಂದಿದ್ದು ಎರಡನೇ ಸ್ಥಾನದಲ್ಲಿದೆ. ಗಮನಾರ್ಹ ಸಂಗತಿ ಏನೆಂದರೆ, ಭಾರತದಿಂದ ಆ್ಯಪಲ್‌ ರಫ್ತು ಕಳೆದ ಏಪ್ರಿಲ್-ಸೆಪ್ಟೆಂಬರ್‌ ಅವಧಿಯಲ್ಲಿ 33% ಹೆಚ್ಚಳವಾಗಿದೆ. ಮುಖ್ಯವಾಗಿ ತಮಿಳುನಾಡಿನ ಫಾಕ್ಸ್‌ ಕಾನ್‌ ಘಟಕದಿಂದ ಹೆಚ್ಚಿನ ರಫ್ತು ಆಗಿತ್ತು. ಆ್ಯಪಲ್‌ ಈಗ ಐಫೋನ್‌ 16ರ ಎಲ್ಲ ಮಾದರಿಗಳನ್ನೂ ಭಾರತದಲ್ಲಿ ತಯಾರಿಸುತ್ತಿದೆ. ಇದೊಂದು ಚಾರಿತ್ರಿಕ ಹೆಜ್ಜೆಯಾಗಿದೆ. ಏಕೆಂದರೆ ಈ ಹಿಂದೆ ಕಂಪನಿಯು ಚೀನಾದಲ್ಲಿ ಪ್ರೀಮಿಯಂ ಪ್ರೊಡಕ್ಷನ್‌ ಮಾಡುತ್ತಿತ್ತು. ಈಗ ಭಾರತದತ್ತ ಗಮನ ಹರಿಸಿರುವುದು ಸ್ಪಷ್ಟವಾಗಿದೆ.

ಈ ಸುದ್ದಿಯನ್ನೂ ಓದಿ: Minister Shivaraj Tangadagy: ಬಿಜೆಪಿ ಅವಧಿಯಲ್ಲೂ ವಕ್ಫ ನೋಟೀಸ್ ನೀಡಿದೆ: ಸಚಿವ ಶಿವರಾಜ ತಂಗಡಗಿ ವಾಗ್ದಾಳಿ