Thursday, 19th September 2024

Arms found in JK: ಜಮ್ಮು-ಕಾಶ್ಮೀರದಲ್ಲಿ ಯುದ್ಧಕ್ಕೆ ಸಾಕಾಗುವಷ್ಟು ಅಕ್ರಮ ಶಸ್ತ್ರಾಸ್ತ್ರ ಪತ್ತೆ- ಮೋದಿ ಭೇಟಿ ವೇಳೆ ವಿಧ್ವಂಸಕ ಕೃತ್ಯಕ್ಕೆ ಭಾರೀ ಸಂಚು?

Arms Found in JK

ಶ್ರೀನಗರ: ಚುನಾವಣೆ ಗರಿಗೆದರಿರುವ ಜಮ್ಮು-ಕಾಶ್ಮೀರ(Jammu and Kashmir)ದಲ್ಲಿ ಪ್ರಚಾರಕ್ಕೆಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಭೇಟಿ ನೀಡುವ ಎರಡು ದಿನ ಮುನ್ನವೇ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು(Arms found in JK) ಪತ್ತೆಯಾಗಿವೆ. ಕುಪ್ವರಾ ಜಿಲ್ಲೆಯ ಕೇರನ್‌ ಸೆಕ್ಟರ್‌ (Keran Sector)ನಲ್ಲಿರುವ ಗಡಿ ನಿಯಂತ್ರಣ ರೇಖೆ(Line of control) ಬಳಿ ಭಾರತೀಯ ಸೇನೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ನಡೆಸಿದ ಜಂಟೀ ಕಾರ್ಯಾಚರಣೆ ವೇಳೆ ಈ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ಆಮೂಲಕ ಪ್ರಧಾನಿ ಭೇಟಿ ವೇಳೆ ದಾಳಿಗೆ ಭಾರೀ ಸಂಚು ರೂಪಿಸಲಾಗಿತ್ತುಎಂಬುದು ಬಯಲಾಗಿದೆ.

ಎಕ್ಸ್‌ನಲ್ಲಿ ಸೇನೆ ಪೋಸ್ಟ್‌ವೊಂದನ್ನು ಮಾಡಿದ್ದು, ಗುಪ್ತಚರ ಇಲಾಖೆ ಮಾಹಿತಿಯನ್ನಾಧರಿಸಿ ಜಂಟೀ ಕಾರ್ಯಾಚರಣೆ ಕೈಗೆತ್ತಿಕೊ‍ಳ್ಳಲಾಗಿತ್ತು. ಈ ವೇಳೆ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಒಂದು ಯುದ್ಧಕ್ಕೆ ಬೇಕಾದಂತಹ ಶಸ್ತ್ರಾಸ್ತ್ರಗಳನ್ನು ಕಂಡು ಸೇನೆ ಶಾಕ್‌ ಆಗಿದೆ. ದಾಳಿ ವೇಳೆ ಎಕೆ 47 ಪಿಸ್ತೂಲ್‌ , ಹ್ಯಾಂಡ್ ಗ್ರೆನೇಡ್‌ಗಳು, ಆರ್‌ಪಿಜಿ ರೌಂಡ್‌ಗಳು, ಸುಧಾರಿತ ಸ್ಫೋಟಕ ಸಾಧನಗಳು, ಮದ್ದು ಗುಂಡುಗಳು ಮತ್ತು ಸ್ಫೋಟಕಗಳು ಪತ್ತೆಯಾಗಿದ್ದು, ಅದನ್ನು ಸೀಜ್‌ ಮಾಡಲಾಗಿದೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ಮೋದಿ ಅವರು ಎರಡು ಬಾರಿ ಭೇಟಿ ನೀಡಲಿದ್ದಾರೆ. ಅವರ ಮೊದಲ ಭೇಟಿ ಸೆಪ್ಟೆಂಬರ್ 14 ರಂದು ಇದ್ದು, ಸೆಪ್ಟೆಂಬರ್ 19 ರಂದು ಎರಡನೇ ಬಾರಿ ಭೇಟಿ ನೀಡುತ್ತಿದ್ದಾರೆ.

ಜಮ್ಮು ಮತ್ತು ಕಾಶ್ಮೀರ(Jammu-Kashmir)ದಲ್ಲಿ ಮತ್ತೆ ಉಗ್ರರ ಉಪಟಳ(Terror attack) ಶುರುವಾಗಿದ್ದು, ನಿನ್ನೆ ನಡೆದ ಸೇನಾ ಕಾರ್ಯಾಚರಣೆಯಲ್ಲಿ ಜೈಶ್-ಎ-ಮೊಹಮ್ಮದ್ (JEM) ಸಂಘಟನೆಯ ಮೂವರು ಉಗ್ರರನ್ನು ಹೊಡೆದುರುಳಿಸಿದ್ದಾರೆ. ಉಧಂಪುರದ ಬಸಂತ್‌ಗಢ ಪ್ರದೇಶದಲ್ಲಿ ಬುಧವಾರ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಉಗ್ರರು ಸೇನೆ ಬೀಸಿದ ಬಲೆಗೆ ಬಿದ್ದಿದ್ದು, ಯೋಧರು ನಾಲ್ಕು ದಿಕ್ಕಿನಿಂದಲೂ ಅವರನ್ನು ಆವರಿಸಿದ್ದರು. ಬಳಿಕ ನಡೆದ ಗುಂಡಿನ ಚಕಮಕಿಯಲ್ಲಿ ಉಗ್ರರನ್ನು ಹೊಡೆರುದುಳಿಸುವಲ್ಲಿ ಸೇನೆ ಯಶಸ್ವಿಯಾಗಿದೆ.

ಈ ಸುದ್ದಿಯನ್ನೂ ಓದಿ: Terror attack: ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಸೇನೆಯ ಭರ್ಜರಿ ಬೇಟೆ; ಮೂವರು ಜೈಷ್‌ ಉಗ್ರರ ಎನ್‌ಕೌಂಟರ್‌