Sunday, 15th December 2024

ಸೈನಿಕ ಶಾಲೆಗೆ ಶಹೀದ್ ಭಗತ್ ಸಿಂಗ್ ಎಂದು ನಾಮಕರಣ

Arvind Kejrivalನವದೆಹಲಿ : ದೆಹಲಿಯ ಸೈನಿಕ ಶಾಲೆಗೆ ಶಹೀದ್ ಭಗತ್ ಸಿಂಗ್ ಹೆಸರಿಡುವು ದಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.

ಈ ಶಾಲೆಯ ಹೆಸರು ಶಹೀದ್ ಭಗತ್ ಸಿಂಗ್ ಆರ್ಮ್ಸ್ ಪ್ರಿಪರೇಟರಿ ಸ್ಕೂಲ್. ಅಲ್ಲಿ ಶಿಕ್ಷಣವನ್ನು ಉಚಿತವಾಗಿ ನೀಡಲಾಗುವುದು. ಈ ವಿಶೇಷ ಸೈನಿಕ ಶಾಲೆಯ ಎಲ್ಲಾ ವೆಚ್ಚವನ್ನು ದೆಹಲಿ ಸರ್ಕಾರ ಭರಿಸಲಿದೆ. 14 ಎಕರೆ ಜಾಗದಲ್ಲಿ ಜರೋಡಾ ಕಲಾನ್‌ನಲ್ಲಿ ನಿರ್ಮಾಣವಾಗಲಿರುವ ಈ ಶಾಲೆ ಹಾಸ್ಟೆಲ್‌ ಸೌಲಭ್ಯ ಹೊಂದಿರಲಿದೆ.

ಮಾರ್ಚ್ 23 ‘ಭಗತ್ ಸಿಂಗ್ ಹುತಾತ್ಮರಾದ ದಿನ. ರಾಜಧಾನಿಯಲ್ಲಿ ಶಾಲೆಯನ್ನು ಸ್ಥಾಪಿಸುವುದಾಗಿ ಡಿಸೆಂಬರ್ 2020 ರಲ್ಲಿ ನಮ್ಮ ಸರ್ಕಾರವು ಘೋಷಿಸಿತ್ತು. ಆ ಶಾಲೆಯಲ್ಲಿ ವಿದ್ಯಾರ್ಥಿಗಳು ಸೈನ್ಯ, ಎನ್‌ಡಿಎ ಮತ್ತು ಇತರ ಸಶಸ್ತ್ರ ಭದ್ರತಾ ಪಡೆಗಳಿಗೆ ಸಿದ್ದತೆ ನಡೆಸಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

ದೆಹಲಿಯ ಸರ್ಕಾರಿ ಶಾಲೆಗಳನ್ನು ಉನ್ನತ ದರ್ಜೆಗೆ ಏರಿಸುವ ಉದ್ದೇಶದಿಂದ ಅರವಿಂದ್ ಕೇಜ್ರಿವಾಲ್ ಸರ್ಕಾರವು ದೇಶ ಮತ್ತು ವಿದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಿಂದ 200 ಶಿಕ್ಷಕರಿಗೆ ತರಬೇತಿ ನೀಡಿದೆ.