ಗುವಾಹಟಿ: ನೈಜ ಜನಸಂಖ್ಯೆಗಿಂತ ಆಧಾರ್ ಕಾರ್ಡು (Adhar Card) ಹೊಂದಿರುವವರ ಸಂಖ್ಯೆ ಹೆಚ್ಚಿದ್ದು, ಇದರ ನೈಜ ಚಿತ್ರಣ ಪತ್ತೆ ಹಚ್ಚಲು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮಾ(Assam Chief Minister Himant Biswa Sarma) ಅವರು ಎ.ಆರ್.ಎನ್ (ARN Application) ಅರ್ಜಿ ಸಲ್ಲಿಸುವಂತೆ ಶನಿವಾರ ತಿಳಿಸಿದ್ದಾರೆ.
ಮುಖ್ಯಮಂತ್ರಿಗಳು ತಮ್ಮ ಹೇಳಿಕೆಯಲ್ಲಿ ಜನಸಂಖ್ಯೆಗಿಂತ ಆಧಾರ್ ಕಾರ್ಡುಗಾಗಿ ಅರ್ಜಿ ಸಲ್ಲಿಸಿದವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಹೀಗಾಗಿ, ಸಂಶಯಿತ ವ್ಯಕ್ತಿಗಳ ಪತ್ತೆ ಹಚ್ಚಲು ಆಧಾರ್ ಕಾರ್ಡು ಹೊಂದಿರುವವರು ಎ.ಆರ್.ಎನ್ ಅರ್ಜಿ ಸಲ್ಲಿಸುವಂತೆ ಗುವಾಹಟಿ(Guwahati) ಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಅನುಮತಿ ಇಲ್ಲದೆ ರಾಜ್ಯದೊಳಗೆ ನೆಲೆಸಿರುವ ಜನರನ್ನು ಪತ್ತೆ ಹಚ್ಚಲು ಸರಕಾರ ಈ ಕ್ರಮ ಕೈಗೊಂಡಿದೆ ಎಂದು ಇದೇ ವೇಳೆ ತಿಳಿಸಿದರು.ಅದರಲ್ಲೂ, ಅಸ್ಸಾಂ ರಾಜ್ಯದಲ್ಲಿ ಆಧಾರ್ ಕಾರ್ಡು ಪಡೆಯುವುದು ಇನ್ನು ಮುಂದೆ ಸುಲಭವಲ್ಲ ಎಂದು ಎಚ್ಚರಿಕೆ ನೀಡಿದರು.
ಕಳೆದ ಎರಡು ತಿಂಗಳಲ್ಲಿ ಅನುಮತಿ ಇಲ್ಲದೆ ನೆರೆದ ಬಾಂಗ್ಲಾದೇಶ(Bangladesh) ದಿಂದ ವಲಸೆ ಬಂದಿರುವುದು ಸಾಬೀತಾಗಿದ್ದು, ಅಂಥವರ ಪತ್ತೆಗಾಗಿ ಕ್ರಮ ಕೈಗೊಳ್ಳಲಾಗಿದ್ದು, ಅವರನ್ನು ಮರಳಿ ಅವರ ದೇಶಕ್ಕೆ ಕಳಿಸಲಾಗಿದೆ ಎಂದರು.