Thursday, 12th December 2024

ಸಿಕಂದರಾಬಾದ್ ರೈಲ್ವೆ ನಿಲ್ದಾಣದ ವಿಧ್ವಂಸಕ ಕೃತ್ಯ: ಸೂತ್ರಧಾರನ ಬಂಧನ

ಸಿಕಂದರಾಬಾದ್ : ಸಿಕಂದರಾಬಾದ್ ರೈಲ್ವೆ ನಿಲ್ದಾಣದಲ್ಲಿ ವಿಧ್ವಂಸಕ ಕೃತ್ಯದ ಹಿಂದಿನ ಮಾಸ್ಟರ್ ಮೈಂಡ್ʼನನ್ನ ಬಂಧಿಸ ಲಾಗಿದೆ. ನರಸರಪೇಟದ ಸೈಡೆಫೆನ್ಸ್ ಅಕಾಡೆಮಿ ನಿರ್ದೇಶಕ ಆವುಲಾ ಸುಬ್ಬರಾವ್ ಮುಖ್ಯ ಸೂತ್ರಧಾರ ಎಂದು ಹೇಳಲಾಗಿದೆ.

ಆತ, ಅಗ್ನಿಪಥ್‌ ಯೋಜನೆಯಿಂದ ಹಾನಿಯಾಗುತ್ತೆ ಎಂಬ ವೀಡಿಯೊ ಸಂದೇಶದ ಮೂಲಕ ಸೇನೆಯು ಅಭ್ಯರ್ಥಿಗಳನ್ನ ಪ್ರಚೋದಿಸಿದ್ದಾನೆ ಎಂದು ಪೊಲೀಸರು ಕಂಡು ಕೊಂಡರು. ಖಾಸಗಿ ಕೇಂದ್ರಗಳ ಆಪರೇಟರ್ʼಗಳು ಸಹ ಪ್ರತಿಭಟನಾಕಾರ ರೊಂದಿಗೆ ಸಹಕರಿಸಿರುವುದು ಕಂಡುಬಂದಿದೆ.

ಆರೋಪಿಗಳು ಎರಡು ದಿನಗಳ ಹಿಂದೆ ವಾಟ್ಸಾಪ್ ಗ್ರೂಪ್ ರಚಿಸಿ ವಿಧ್ವಂಸಕ ಕೃತ್ಯ ಎಸಗಿದ್ದರು. ಸೇನಾ ಅಭ್ಯರ್ಥಿಗಳೊಂದಿಗೆ ಖಾಸಗಿ ವ್ಯಕ್ತಿಗಳು ನುಸುಳಿದ್ದಾರೆ ಎಂದು ಪೊಲೀಸರು ಕಂಡುಕೊಂಡಿದ್ದಾರೆ. ಕೃಷ್ಣಾ ಎಕ್ಸ್ಪ್ರೆಸ್ ರೈಲಿನಲ್ಲಿ ಬಂದ ಅದಿಲಾಬಾದ್‌ ನಿಂದ ಸುಮಾರು 300 ಅಭ್ಯರ್ಥಿಗಳನ್ನ ಗುರುತಿಸಲಾಗಿದೆ. ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾದ ದೃಶ್ಯಗಳ ಆಧಾರದ ಮೇಲೆ ಪೊಲೀಸರು ಪ್ರತಿಭಟನಾಕಾರರನ್ನು ಗುರುತಿಸುತ್ತಿದ್ದಾರೆ.

ತಪ್ಪಿತಸ್ಥರೆಂದು ಸಾಬೀತಾದರೆ, ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆ ವಿಧಿಸುವ ಸಾಧ್ಯತೆ ಇದೆ.