Thursday, 12th December 2024

Bibhav Kumar : ಸ್ವಾತಿ ಮಾಲಿವಾಲ್‌ಗೆ ಕಿರುಕುಳ ಪ್ರಕರಣ; ಕೇಜ್ರಿವಾಲ್‌ ಆಪ್ತ ಬಿಭವ್‌ ಕುಮಾರ್‌ಗೆ ಬೇಲ್‌

Bibhav Kumar

ನವದೆಹಲಿ: ಡೆಲ್ಲಿ ಸಿಎಂ ಅರವಿಂದ್‌ ಕ್ರೇಜ್ರಿವಾಲ್‌ ಅವರ ಆಪ್ತಸಹಾಯಕ  ಬಿಭವ್‌ ಕುಮಾರ್‌ಗೆ (Bibhav Kumar)  ಆಮ್ ಆದ್ಮಿ ಪಕ್ಷದ (AAP) ರಾಜ್ಯಸಭಾ  ಸದಸ್ಯೆ ಸ್ವಾತಿ ಮಲಿವಾಲ್ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಸೋಮವಾರ ಸುಪ್ರೀಂ ಕೋರ್ಟ್‌ (Supreme Court) ಜಾಮೀನು ನೀಡಿದೆ.  ಜಾಮೀನು ಕೋರಿ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಉಜ್ಜಲ್ ಭುಯಾನ್ ಅವರ ನ್ಯಾಯಪೀಠ ವಿಚಾರಣೆ ನಡೆಸಿ ಬಂಧನದಿಂದ ಮುಕ್ತಿ ನೀಡಿತ್ತು.

ವಿಚಾರಣೆಯ ಸಮಯದಲ್ಲಿ, ನ್ಯಾಯಮೂರ್ತಿ ಭುಯಾನ್ ಅವರು ಬಿಭವ್ ಕುಮಾರ್ 100 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದರು ಮತ್ತು ಜಾರ್ಜ್‌ಶೀಟ್‌ ಸಲ್ಲಿಸಿರುವುದನ್ನು ಗಮನಿಸಿ ಬೇಲ್‌ ನೀಡಿದೆ. “ಮಾಲಿವಾಲ್ ಅವರಿಗೆ ಆಗಿರುವ ಗಾಯಗಳು  ಸಾಮಾನ್ಯವಾಗಿದೆ. ಇದು ಜಾಮೀನು ನೀಡಬಹುದಾದ  ಪ್ರಕರಣ.   ಅದಕ್ಕೆ ವಿರೋಧ ಮಾಡುವಂತಿಲ್ಲ. ಇಂತಹ ಪ್ರಕರಣದಲ್ಲಿ ನೀವು ಒಬ್ಬ ವ್ಯಕ್ತಿಯನ್ನು ಜೈಲಿನಲ್ಲಿಡಲು ಸಾಧ್ಯವಿಲ್ಲ” ಎಂದು ನ್ಯಾಯಮೂರ್ತಿ ಭುಯಾನ್ ಅಭಿಪ್ರಾಯಪಟ್ಟರು.

ದೆಹಲಿ ಪೊಲೀಸರ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು, “ಕೆಲವು ಪ್ರಮುಖ ಸಾಕ್ಷಿಗಳು ಅವರ (ಬಿಭವ್) ಪ್ರಭಾವಕ್ಕೆ ಒಳಗಾಗಿದ್ದಾರೆ. ಅವುಗಳನ್ನು ಪರಿಶೀಲಿಸಬೇಕು.  ಹಾಗಾದರೆ ನಾನು ವಿರೋಧಿಸುವುದಿಲ್ಲಎಂದು ಹೇಳಿದರು.

“ಆಗ, ನಾವು ರೀತಿಯಾಗಿ ನಾವು ಯಾವುದೇ ವ್ಯಕ್ತಿಗೆ ಜಾಮೀನು ನೀಡಲು ಸಾಧ್ಯವಿಲ್ಲ” ಎಂದು ನ್ಯಾಯಮೂರ್ತಿ ಭುಯಾನ್ ಹೇಳಿದರು.

ಏನಿದು ಪ್ರಕರಣ?

ಮೇ 13 ರಂದು ಮುಖ್ಯಮಂತ್ರಿ ನಿವಾಸದಲ್ಲಿ ಬಿಭವ್ ಕುಮಾರ್ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸ್ವಾತಿ ಮಾಲಿವಾಲ್ ಆರೋಪಿಸಿದ್ದರು. ಏಮ್ಸ್ ಬಿಡುಗಡೆ ಮಾಡಿದ ಆಕೆಯ ವೈದ್ಯಕೀಯ ವರದಿಯಲ್ಲಿ ಅವರ  ಮುಖ ಮತ್ತು ಕಾಲಿನ ಮೇಲೆ ಗಾಯಗಳು ಕಂಡುಬಂದಿದ್ದವು.

ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 308, 341, 354 ಬಿ, 506 ರ ಅಡಿಯಲ್ಲಿ ಪ್ರಕರಣ ದಾಖಲಾದ ನಂತರ ದೆಹಲಿ ಪೊಲೀಸರು ಮೇ 18 ರಂದು ಬಿಭವ್ ಕುಮಾರ್ ಅವರನ್ನು ಬಂಧಿಸಿದ್ದರು. ಕಳೆದ ತಿಂಗಳು ದೆಹಲಿ ನ್ಯಾಯಾಲಯವು ಕುಮಾರ್ ಅವರ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 13 ರವರೆಗೆ ವಿಸ್ತರಿಸಿತ್ತು