Sunday, 15th December 2024

ಕೇಜ್ರಿವಾಲ್ ಸರ್ಕಾರ ಸಂಪುಟ ಪುನಾರಚನೆಗೆ ಅನುಮೋದನೆ

#Arvind Kejrival

ವದೆಹಲಿ : ಸರ್ಕಾರ ಸಂಪುಟ ಪುನಾರಚನೆಗೆ ಮುಖ್ಯಮಂತ್ರಿ ಕೇಜ್ರಿವಾಲ್ ಕಳುಹಿಸಿದ ಪುನರ್ರಚನೆಯ ಪ್ರಸ್ತಾಪವನ್ನ ಲೆಫ್ಟಿನೆಂಟ್ ಗವರ್ನರ್ ಅನುಮೋದಿಸಿದ್ದಾರೆ. ಇದರೊಂದಿಗೆ, ಅತಿಶಿಗೆ ಹಣಕಾಸು ಮತ್ತು ಕಂದಾಯ ಇಲಾಖೆಯ ಜವಾಬ್ದಾರಿಯೂ ಸಿಕ್ಕಿದೆ.

ಮಾಜಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಜೈಲಿಗೆ ಹೋದ ನಂತರ ಈ ವರ್ಷದ ಮಾರ್ಚ್‌ನಲ್ಲಿ ಅತಿಶಿ ಮತ್ತು ಸೌರಭ್ ಭಾರದ್ವಾಜ್ ಅವರನ್ನ ಸಂಪುಟಕ್ಕೆ ಸೇರಿಸಲಾಯಿತು.

ಅತಿಶಿ ಅವರಿಗೆ ಶಿಕ್ಷಣ, ಪಿಡಬ್ಲ್ಯೂಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಇಂಧನ, ಕಲೆ ಸಂಸ್ಕೃತಿ ಮತ್ತು ಭಾಷೆ ಮತ್ತು ಪ್ರವಾಸೋದ್ಯಮ ಆರು ಇಲಾಖೆಗಳ ಜವಾಬ್ದಾರಿಯನ್ನು ವಹಿಸಲಾಯಿತು. ಆದರೆ, ಸೌರಭ್ ಅವರಿಗೆ ಆರೋಗ್ಯ, ನಗರಾಭಿವೃದ್ಧಿ, ನೀರು, ನೀರಾ ವರಿ ಮತ್ತು ಪ್ರವಾಹ ನಿಯಂತ್ರಣ, ವಿಜಿಲೆನ್ಸ್, ಸೇವೆಗಳು ಮತ್ತು ಕೈಗಾರಿಕೆ ಇಲಾಖೆಗಳನ್ನ ನೀಡಲಾಗಿದೆ.

ಸಿಸೋಡಿಯಾ ಜೈಲಿಗೆ ಹೋದ ನಂತರ, ಹಣಕಾಸು ಮತ್ತು ಕಂದಾಯ ಇಲಾಖೆಯ ಜವಾಬ್ದಾರಿಯನ್ನು ಕೈಲಾಶ್ ಗೆಹ್ಲೋಟ್‌ಗೆ ಹಸ್ತಾಂತರಿಸಲಾಯಿತು. ಅವರು ಪ್ರಸಕ್ತ ಹಣಕಾಸು ವರ್ಷದ ಬಜೆಟ್ ಅನ್ನು ಸಹ ಮಂಡಿಸಿದರು. ಆದರೆ ಈಗ ಎರಡೂ ಖಾತೆ ಗಳನ್ನ ಅತಿಶಿಗೆ ನೀಡಲಾಗಿದೆ.