ವಿಶಾಖಪಟ್ಟಣಂ: ‘ಅಸಾನಿ’ ಚಂಡಮಾರುತದ ಹಿನ್ನೆಲೆಯಲ್ಲಿ ವೈಜಾಗ್ ಏರ್‌ಫೋರ್ಟ್ ನಲ್ಲಿರುವ ಎಲ್ಲಾ ವಿಮಾನಗಳ ಹಾರಾಟ ರದ್ದುಗೊಳಿಸಲಾಗಿದೆ.
ಚಂಡಮಾರುತವು ಆಂಧ್ರಪ್ರದೇಶದ ಕರಾವಳಿಗೆ ಸಮೀಪಿಸುತ್ತಿದೆ ಮತ್ತು ಭಾರೀ ಮಳೆ ಮತ್ತು ಗಾಳಿ ಬೀಸುವ ಸಾಧ್ಯತೆಯಿದೆ. ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಾಗಿ ವಿಶಾಖ ಪಟ್ಟಣಂ ವಿಮಾನ ನಿಲ್ದಾಣಕ್ಕೆ ಮತ್ತು ಅಲ್ಲಿಂದ ವಿಮಾನ ಸೇವೆಗಳನ್ನು ಸ್ಥಗಿತಗೊಳಿಸಿ ದ್ದಾರೆ.
ಇಂಡಿಗೋ ತನ್ನ ಎಲ್ಲಾ ವಿಮಾನಗಳನ್ನು ವಿಶಾಖಪಟ್ಟಣಂ ಒಳಗೆ ಮತ್ತು ಹೊರಗೆ ರದ್ದುಗೊಳಿಸುವುದಾಗಿ ಘೋಷಿಸಿದೆ. ಏರ್ ಏಷ್ಯಾ ದೆಹಲಿ-ವಿಶಾಖಪಟ್ಟಣಂ ಮತ್ತು ಬೆಂಗಳೂರು-ವಿಶಾಖಪಟ್ಟಣಂ ವಿಮಾನಗಳನ್ನು ರದ್ದುಗೊಳಿಸಿದೆ. ಏರ್ ಇಂಡಿಯಾ ಮುಂಬೈ-ರಾಯಪುರ-ವಿಶಾಖಪಟ್ಟಣಂ ಮತ್ತು ದೆಹಲಿ-ವಿಶಾಖಪಟ್ಟಣಂ ವಿಮಾನಗಳನ್ನು ಸಹ ರದ್ದುಗೊಳಿಸಿದೆ.
ತೀವ್ರ ಚಂಡಮಾರುತದ ಪ್ರಭಾವದ ಅಡಿಯಲ್ಲಿ ವಿಶಾಖಪಟ್ಟಣಂನಲ್ಲಿನ ಕೆಟ್ಟ ಹವಾ ಮಾನವು ವಿಮಾನ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು.
ಹೈದರಾಬಾದ್, ಮುಂಬೈ, ಚೆನ್ನೈ ಮತ್ತು ವಿಜಯವಾಡದಿಂದ ವಿವಿಧ ವಿಮಾನಯಾನ ಸಂಸ್ಥೆಗಳ ವಿಮಾನಗಳನ್ನು ಸಹ ರದ್ದುಗೊಳಿಸಲಾಗಿದೆ. ‘ಅಸನಿ’ ಆಂಧ್ರಪ್ರದೇಶದ ಕರಾವಳಿಗೆ ಸಮೀಪಿಸುತ್ತಿರುವುದರಿಂದ, ಕರಾವಳಿ ಪ್ರದೇಶದ ಕೆಲವು ಭಾಗ ಗಳಲ್ಲಿ ಗಾಳಿ ಮತ್ತು ಮಳೆಯಾಗುತ್ತಿದೆ.