ಆರೋಗ್ಯಶುಶ್ರೂಷಾ ಉಲ್ಲಂಘನೆಗಳು ಪಟ್ಟಿಯ ಮೊದಲ ಸ್ಥಾನದಲ್ಲಿ
ಹಿಂದಿನ ವರ್ಷಕ್ಕೆ ಹೋಲಿಸಿದರೆ, ಪ್ರಕ್ರಿಯೆಗೊಳಪಡಿಸಲಾದ ಸಂದರ್ಭಗಳಲ್ಲಿ 34% ಹೆಚ್ಚಳಿಕೆ
ಆರೋಗ್ಯಶುಶ್ರೂಷೇ ಅತಿಹೆಚ್ಚು ಉಲ್ಲಂಘನೆ ಮಾಡಿದ ಕ್ಷೇತ್ರವಾಗಿ ಹೊರಹೊಮ್ಮಿದ್ದು, ಪ್ರಕ್ರಿಯೆಗೊಳಪಡಿಸಲ್ಪಟ್ಟ ಎಲ್ಲಾ ಜಾಹೀರಾತುಗಳ ಪೈಕಿ 21%ಗೆ ಕಾರಣವಾಗಿತ್ತು, ಇದರ ತದನಂತರದಲ್ಲಿ, ತಲಾ18%ನಲ್ಲಿ, ಸಾಂಪ್ರದಾಯಿಕ ಶಿಕ್ಷಣ ಮತ್ತು ವೈಯಕ್ತಿಕ ಆರೈಕೆ ಬಂದಿತ್ತು
ಭಾರತದ ಜಾಹೀರಾತು ಮಾನದಂಡಗಳ ಪರಿಷತ್ತು(ASCI) ಏಪ್ರಿಲ್ 2023ದಿಂದ ಸೆಪ್ಟೆಂಬರ್ 2023ವರೆಗಿನ ಅವಧಿಗೆ ತನ್ನ ಅರ್ಧವಾರ್ಷಿಕ ದೂರುಗಳ ವರದಿಯನ್ನು ಪ್ರಕಟಿಸಿದ್ದು, ಇದು ಜಾಹೀರಾತು ಮಾನದಂಡಗಳಲ್ಲಿ ವಿಕಸನಗೊಳ್ಳುತ್ತಿರುವ ಪ್ರವೃತ್ತಿಗಳು ಮತ್ತು ಉದ್ದೇಶಗಳ ಬಗ್ಗೆ ಒಳನೋಟ ಒದಗಿಸುತ್ತದೆ
ವರದಿಯು, ಪ್ರಕ್ರಿಯೆಗೊಳಪಡಿಸಲ್ಪಟ್ಟ ದೂರುಗಳಲ್ಲಿ(4491) 34% ಹೆಚ್ಚಳಿಕೆ ತೋರಿಸಿದ್ದು, ಇದಕ್ಕೆ ಪೂರಕವಾಗಿ, ಪ್ರಕ್ರಿಯೆಗೊಳಪಡಿಸಲ್ಪಟ್ಟ ಜಾಹೀರಾತುಗಳ ಸಂಖ್ಯೆಯಲ್ಲಿ 27% ಹೆಚ್ಚಳಿಕೆಯನ್ನು ತೋರಿಸಿ, ಜವಾಬ್ದಾರಿಯುತವಾದ ಜಾಹೀರಾತು ಮತ್ತು ಗ್ರಾಹಕ ಸಂರಕ್ಷಣೆಗೆ ASCIದ ಸತತ ಬದ್ಧತೆಯನ್ನು ಒತ್ತಿಹೇಳುತ್ತದೆ.
ಪ್ರಕ್ರಿಯೆಗೊಳಪಡಿಸಲ್ಪಟ್ಟ 3,501 ಜಾಹೀರಾತುಗಳ ಪೈಕಿ, 564 (16%)ಅನ್ನು ಸಂಭಾವ್ಯವಾಗಿ ಕಾನೂನಿನ ನೇರ ಉಲ್ಲಂಘನೆ ಎಂದು ಘೋಷಿಸಲಾಯಿತು ಮತ್ತು ಇದು ಹಿಂದಿನ ವರ್ಷಕ್ಕಿಂತ 22% ಹೆಚ್ಚಾಗಿದೆ. ಪ್ರಕ್ರಿಯೆಗೊಳಪಡಿಸಲ್ಪಟ್ಟ ಒಟ್ಟೂ ಜಾಹೀರಾತುಗಳ ಪೈಕಿ 35%, ಯಾವುದೇ ವಿರೋಧವಿಲ್ಲದೆ ಕೂಡಲೇ ಹಿಂದೆಗೆದುಕೊಳ್ಳಲ್ಪಟ್ಟವು ಅಥವಾ ಬದಲಾಯಿಸಲ್ಪಟ್ಟವು. ಮೇಲಾಗಿ, 47% ಜಾಹೀರಾತುಗಳು ASCI ಸಂಹಿತೆಯನ್ನು ಉಲ್ಲಂಘಿಸಿವೆ ಎಂದು ಕಂಡುಬಂದಿದ್ದು, ಆ ಜಾಹೀರಾತುಗಳನ್ನು ಹಿಂದೆಗೆದುಕೊಳ್ಳಲು ಅಥವಾ ಬದಲಾಯಿಸಲು ಶಿಫಾರಸು ಮಾಡಲಾಯಿತು. ಕೇವಲ 2% ದೂರುಗಳನ್ನು ಮಾತ್ರ ತಿರಸ್ಕರಿಸಲಾಯಿತು.
ಪ್ರಕ್ರಿಯೆಗೊಳಪಡಿಸಲ್ಪಟ್ಟ 3,501 ದೂರುಗಳ ಪೈಕಿ, ಡಿಜಿಟಲ್ ಮಾಧ್ಯಮವು 79%ನೊಂದಿಗೆ ಉಲ್ಲಂಘನೆಗಳ ಪ್ರಮುಖ ಮೂಲವಾಗಿಯೇ ಉಳಿದಿತ್ತು. ಮುದ್ರಣ ಮಾದ್ಯಮ ಹಾಗೂ ದೂರದರ್ಶನ ಕ್ರಮವಾಗಿ 17% and 3% ವರದಿ ಮಾಡಲಾದ ಉಲ್ಲಂಘನೆಗಳಿಗೆ ಕಾರಣವಾದರೆ, ಇತರ ಮಾಧ್ಯಮಗಳ ಪಾಲು 2% ಆಗಿತ್ತು.
ಒಟ್ಟೂ ದೂರುಗಳ ಪೈಕಿ, ಗ್ರಾಹಕ ದೂರುಗಳು 21.3% ಆಗಿದ್ದು, ಇದು ಜಾಹೀರಾತು ಮಾನದಂಡಗಳನ್ನು ಎತ್ತಿಹಿಡಿಯುವಲ್ಲಿ ಮಹತ್ತರವಾದ ಸಾರ್ವಜನಿಕ ತೊಡಗಿಕೊಳ್ಳುವಿಕೆಯನ್ನು ಸೂಚಿಸುತ್ತದೆ. 75.4% ದೂರುಗಳನ್ನು ASCI ತಾನಾಗಿಯೇ ಪ್ರಾರಂಭಿಸಿ ಸಂಭಾವ್ಯ ಉಲ್ಲಂಘನೆಗಳನ್ನು ಗುರುತಿಸುವುದಕ್ಕೆ ಸಂಸ್ಥೆಯ ಧನಾತ್ಮಕ ದೃಷ್ಟಿಕೋನವನ್ನು ಪ್ರದರ್ಶಿಸಿತು.
ವರದಿಯಿಂದ ಪಡೆದುಕೊಂಡ ಕೆಲವು ಮುಖ್ಯಾಂಶಗಳು ಈ ಕೆಳಕಂಡಂತಿವೆ:
1. ಡಿಜಿಟಲ್ ಪ್ರಾಬಲ್ಯ: ಬೆಚ್ಚಿಬೀಳಿಸುವ 79% ಸಮಸ್ಯಾತ್ಮಕ ಜಾಹೀರಾತುಗಳು ಆನ್‌ಲೈನ್‌ನಲ್ಲಿ ಕಂಡುಬಂದಿದ್ದು, ಡಿಜಿಟಲ್ ಜಾಹೀರಾತು ಜಗತ್ತಿನಲ್ಲಿ ಇರುವ ಸವಾಲುಗಳನ್ನು ಎತ್ತಿತೋರಿಸಿತು.
2. ನಿಯಂತ್ರಣ ಮೇಲುಸ್ತುವಾರಿ: ASCIದ ಕೇಂದ್ರಿತ ಮೇಲುಸ್ತುವಾರಿ ಕಾರ್ಯತಂತ್ರಗಳು, ಮಾಧ್ಯಮದಲ್ಲಿ ಆಕ್ಷೇಪಾರ್ಹ ಕಂಟೆಂಟ್ ವಿರುದ್ಧ ಹೋರಾಡಲು ಡಿಜಿಟಲ್ ಗಮನಿಕೆಯನ್ನು ವರ್ಧಿಸಿದವು. ಪ್ರಕ್ರಿಯೆಗೊಳಪಡಿಸಲ್ಪಟ್ಟ ಒಟ್ಟೂ ಜಾಹೀರಾತುಗಳ ಪೈಕಿ 98% ಜಾಹೀರಾತುಗಳಲ್ಲಿ ಕೆಲವೊಂದು ರೀತಿಯ ಮಾರ್ಪಾಡುಗಳ ಅಗತ್ಯ ಕಂಡುಬಂದಿತ್ತು.
3. ಸ್ವಯಂಪ್ರೇರಿತ ಅನುಸರಣೆ: ಡಿಜಿಟಲ್ ಜಾಹೀರಾತು ಕ್ಷೇತ್ರದಲ್ಲಿ, ಪ್ರಭಾವಕರು, ASCIಗೆ ದೂರುನೀಡಲಾದ ಒಟ್ಟೂ ಜಾಹೀರಾತುಗಳ ಪೈಕಿ 22% ಜಾಹೀರಾತುಗಳಿಗೆ ಕೊಡುಗೆ ಸಲ್ಲಿಸಿದ್ದರು. ಪ್ರಬಾವಕ ಮಾರ್ಗಸೂಚಿಗಳಿಗಾಗಿ ಪ್ರಕ್ರಿಯೆಗೊಳಪಡಿಸಲ್ಪಟ್ಟ ಜಾಹೀರಾತುಗಳ ಪೈಕಿ 99.4%, ಉಲ್ಲಂಘನೆಯಾಗಿವೆ ಎಂದು ಕಂಡುಬಂದಿತು. ಹಿಂದಿನ ವರ್ಷಗಳಲ್ಲಿದ್ದ 86%ಗೆ ಹೋಲಿಸಿದರೆ, ಪ್ರಭಾವಕರ ಸಂದರ್ಭಗಳ ಪೈಕಿ 92% ಸಂದರ್ಭಗಳಲ್ಲಿ, ASCI ತನ್ನ ಶಿಫಾರಸುಗಳೊಂದಿಗೆ ಅನುಸರಣೆಯನ್ನು ಸ್ವೀಕರಿಸಿ, ASCIದ CCC ಶಿಫಾರಸುಗಳ ಹೆಚ್ಚಿನ ಅನುಸರಣೆಯನ್ನು ಸೂಚಿಸಿತ್ತು.
4. ಪ್ರಧಾನ ಸ್ಥಾನದಲ್ಲಿ ಆರೋಗ್ಯಶುಶ್ರೂಷೆ: ಆರೋಗ್ಯಶುಶ್ರೂಷಾ ಕ್ಷೇತ್ರವು ಅತಿಯಾಗಿ ಉಲ್ಲಂಘನೆ ಮಾಡಿದ ಕ್ಷೇತ್ರವಾಗಿ ಹೊರಹೊಮ್ಮೆ, ಪ್ರಕ್ರಿಯೆಗೊಳಪಡಿಸಲ್ಪಟ್ಟ ಎಲ್ಲಾ ಜಾಹೀರಾತುಗಳ ಪೈಕಿ 21%ಗೆ ಕಾರಣವಾಗಿತ್ತು. ಡಿಜಿಟಲ್ ವೇದಿಕೆಗಳಲ್ಲಿ ಮದ್ದು ಹಾಗೂ ಔಷಧ ಜಾಹೀರಾತುಗಳ ಬೃಹತ್ ಪ್ರಮಾಣ ಈ ಏರಿಕೆ ಕಾರಣ ಎಂದು ಕಂಡುಬಂದಿದೆ.
5. ಕಾನೂನು ಉಲ್ಲಂಘನೆಗಳು: ಔಷಧ ಮತ್ತು ಮಾಟಪರಿಹಾರಗಳ ಕಾಯಿದೆ (Drug and Magic Remedies Act) 1954ದ ನೇರ ಉಲ್ಲಂಘನೆ ಸಂದರ್ಭಗಳಲ್ಲಿ ASCI, ಮಹತ್ತರವಾದ ಹೆಚ್ಚಳಿಕೆ ಗಮನಿಸಿದ್ದು, ಜಾಹೀರಾತುದಾರರಿಗೆ ಜಾಹೀರಾತಿನ ಹಿಂಪಡೆದುಕೊಳ್ಳುವಿಕೆ ಅಥವಾ ಮಾರ್ಪಡಿಸುವಿಕೆಗೆ ಸೂಚನೆ ನೀಡುವುದಕ್ಕೆ ಕಾರಣವಾಗಿತ್ತು. ಕಳೆದ ಹಣಕಾಸು ವರ್ಷದಲ್ಲಿದ್ದ 464 ಜಾಹೀರಾತುಗಳಿಗೆ ಹೋಲಿಸಿದರೆ, ಕೇವಲ ಆರು ತಿಂಗಳುಗಳಲ್ಲಿ ASCI, ಆಯುಷ್ (AYUSH)ಸಚಿವಾಲಯಕ್ಕೆ565 ಜಾಹೀರಾತುಗಳನ್ನು ಸೂಚಿಸಿತ್ತು.
ASCIದ ಸಿಇಒ ಮತ್ತು ಸೆಕ್ರೆಟರಿ ಜನರಲ್ ಮನಿಷಾ ಕಪೂರ್,
“ಡಿಜಿಟಲ್ ಜಾಹೀರಾತುಗಳು ಒಡ್ಡುವ ಸವಾಲುಗಳನ್ನು ಪರಿಹರಿಸುವುದಕ್ಕೆ ASCI ಬದ್ಧವಾಗಿದೆ. ಗ್ರಾಹಕರು ಆನ್‌ಲೈನ್‌ನಲ್ಲೇ ಹೆಚ್ಚು ಸಮಯ ಕಳೆಯುತ್ತಾರೆ ಎಂಬುದನ್ನು ಗಮನಿಸಿದಾಗ ಮತ್ತು, ಆಕ್ಷೇಪಾರ್ಹ ಜಾಹೀರಾತುಗಳ ಸೋರಿಕೆ ಇರುವಂತಹ ಸಂದರ್ಭದಲ್ಲಿ, ಅವರ ಆನ್‌ಲೈನ್ ಸುರಕ್ಷತೆಯ ಸಮಸ್ಯೆಯನ್ನು ಬಗೆಹರಿಸಲು ಎಲ್ಲಾ ಭಾಗೀದಾರರೂ ಒಗ್ಗೂಡುವ ಅಗತ್ಯವೇರ್ಪಟ್ಟಿದೆ. ಆನ್‌ಲೈನ್ ಕ್ಷೇತ್ರದ ಮೇಲಿನ ನಮ್ಮ ನಿರಂತರ ನಿಗಾ, ASCI ಸಂಹಿತೆಯನ್ನು ಉಲ್ಲಂಘಿಸುವ ಜಾಹೀರಾತುಗಳು ಮತ್ತು ಬ್ರ್ಯಾಂಡ್‌ಗಳನ್ನು ಹಿಂಪಡೆದುಕೊಂಡು, ಅವುಗಳು ಸತ್ಯವಾಗಿ, ಮರ್ಯಾದೆಯುತವಾಗಿ ಮತ್ತು ಸುರಕ್ಷಿತವಾಗಿ ಇರುವ ಅಗತ್ಯವನ್ನು ಖಾತರಿಪಡಿಸುತ್ತದೆ. ವಿವಿಧ ಕ್ಷೇತ್ರಗಳು ಉಲ್ಲಂಗನೆಗಳನ್ನು ಗುರುತಿಸಿ, ಹೆಚ್ಚು ಜವಾಬ್ದಾರಿಯುತವಾದ ಜಾಹೀರಾತಿಗೆ ಬದ್ದವಾಗಿರುತ್ತವೆ ಎಂದು ನಾವು ಆಶಿಸುತ್ತೇವೆ.” ಎಂದು ಹೇಳಿದರು.