ನವದೆಹಲಿ: ಹಣಕಾಸು ಪಾವತಿ ಪ್ಲಾಟ್‌ಫಾರ್ಮ್ ಸ್ಟಾರ್ಟ್‌ಅಪ್ ‘ಭಾರತ್‌ಪೇ’ ಸಹ ಸಂಸ್ಥಾಪಕ ಅಶ ನೀರ್ ಗ್ರೋವರ್ ಅವರು ವ್ಯವಸ್ಥಾಪಕ ನಿರ್ದೇಶಕ ಮತ್ತು ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ, ಅತಿ ದೊಡ್ಡ ಷೇರುದಾರನಾಗಿ ಅಶನೀರ್ ಮುಂದುವರಿಯ ಲಿದ್ದಾರೆ.
ನಾನು ಈವರೆಗೂ ಬೆಳೆಸಿರುವ ಮೌಲ್ಯದ ಅರ್ಧದಷ್ಟಾದರೂ ವೃದ್ಧಿ ಸಾಧಿಸಿ…ನಾನು ಈವರೆಗೂ ಬಳಸಲಾಗಿರುವ ಮೊತ್ತದ ಮೂರು ಪಟ್ಟು ಹೆಚ್ಚು ಮೊತ್ತವನ್ನು ಬಿಟ್ಟು ತೆರಳುತ್ತಿದ್ದೇನೆ. ಭಾರತ್‌ಪೇ ವ್ಯವಸ್ಥಾಪಕ ನಿರ್ದೇಶಕ ಸ್ಥಾನಕ್ಕೆ ಈ ಮೂಲಕ ರಾಜೀನಾಮೆ ನೀಡುತ್ತಿದ್ದೇನೆ. ಮಂಡಳಿಯ ನಿರ್ದೇಶಕ ಸ್ಥಾನ ತೊರೆಯುತ್ತಿದ್ದೇನೆ. ಕಂಪನಿಯ ಅತಿ ದೊಡ್ಡ ಪಾಲುದಾರನಾಗಿ ಮುಂದುವರಿಯಲಿದ್ದೇನೆ’ ಎಂದು ಪ್ರಸ್ತಾಪಿಸಿದ್ದಾರೆ.
ಅಶನೀರ್ ಅವರು ಕಂಪನಿಯಲ್ಲಿ ಹೊಂದಿರುವ ಷೇರಿನ ಪೈಕಿ ಶೇಕಡ 8.5ರಷ್ಟು ಪಾಲನ್ನು ₹4,000 ಕೋಟಿಗೆ ಖರೀದಿಸಲು ಕಂಪನಿಯ ಪ್ರಮುಖ ಹೂಡಿಕೆದಾರರು ಅಸಮ್ಮತಿಸಿದ್ದರು. ಕಂಪನಿಯು ಅವರ ವಿರುದ್ಧ ತನಿಖೆ ಕೈಗೊಂಡಿರುವುದನ್ನು ಪ್ರಶ್ನಿಸಿ ಸಿಂಗಪುರದಲ್ಲಿ ಹೂಡಿದ್ದ ವ್ಯಾಜ್ಯದಲ್ಲಿ ಸೋಲು ಕಂಡರು.