Thursday, 12th December 2024

ನಾಮಪತ್ರ ಸಲ್ಲಿಸಿದ ಅಶೋಕ್ ಗೆಹ್ಲೋಟ್

ರ್ದಾರ್‌ಪುರ: ಸರ್ದಾರ್‌ಪುರ ವಿಧಾನಸಭಾ ಕ್ಷೇತ್ರದಿಂದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ.

‘ಹಿಂದೆ ರಾಜಸ್ಥಾನವನ್ನು ಹಿಂದುಳಿದ ರಾಜ್ಯ ಎಂದು ಕರೆಯಲಾಗುತ್ತಿತ್ತು. ಆದರೆ ನಾನು ಸಿಎಂ ಆದ ನಂತರ ಸಾಕಷ್ಟು ಬದಲಾವಣೆಯಾಗಿದೆ. ಇಂದು ರಾಜ್ಯದಲ್ಲಿ ಏಮ್ಸ್, ಐಐಟಿ, ಐಐಎಂ ಸೇರಿದಂತೆ ಇತರೆ ವಿಶ್ವವಿದ್ಯಾನಿಲಯಗಳಿವೆ. ನಾನು ಮೊದಲ ಬಾರಿಗೆ ಸಿಎಂ ಆದಾಗ ಕೇವಲ 6 ವಿಶ್ವವಿದ್ಯಾಲಯ ಗಳಿದ್ದವು. ಈಗ ಉನ್ನತ ಶಿಕ್ಷಣಕ್ಕೆ ಇನ್ನೂ ಹೆಚ್ಚಿನ ಒತ್ತು ನೀಡಲಾಗಿದೆ’ ಎಂದು ಸಿಎಂ ಹೇಳಿದರು.

ರಾಜಸ್ಥಾನ ವಿಧಾನಸಭೆಗೆ ನ.25ರಂದು ಚುನಾವಣೆ ನಡೆಯಲಿದ್ದು, ಡಿ.3ರಂದು ಮತ ಎಣಿಕೆ ನಡೆಯಲಿದೆ.