Thursday, 12th December 2024

ಪ್ರಬಲ ನಾಯಕತ್ವ ದೊರಕದಿದ್ದರೆ ಪ್ರತಿ ನಗರದಲ್ಲೂ ಅಫ್ತಾಬ್ ಹುಟ್ಟುತ್ತಾನೆ: ಅಸ್ಸಾಂ ಸಿಎಂ

ವದೆಹಲಿ: ದೇಶಕ್ಕೆ ಪ್ರಬಲ ನಾಯಕತ್ವ ದೊರಕದಿದ್ದರೆ ಪ್ರತಿ ನಗರದಲ್ಲೂ ಒಬ್ಬೊಬ್ಬ ಅಫ್ತಾಬ್ ಹುಟ್ಟುತ್ತಾನೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾಸ್ ಶರ್ಮ ಶನಿವಾರ ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿ ಪಕ್ಷದ ಪರ ಗುಜರಾತ್ ಚುನಾವಣೆ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಅವರು ಕಚ್‍ನಲ್ಲಿ ನಡೆದ ರ್ಯಾಲಿಯಲ್ಲಿ ನಮ್ಮ ದೇಶಕ್ಕೆ ಮೋದಿಯಂತಹ ಪ್ರಬಲ ನಾಯಕ ದೊರಕದಿದ್ದರೆ ಅಫ್ತಾಬ್‍ನಂಥವರಿಂದ ದೇಶವನ್ನು ರಕ್ಷಿಸಲು ಸಾಧ್ಯ ವಿರಲಿಲ್ಲ ಎಂದು ಎಚ್ಚರಿಸಿದ್ದಾರೆ.

ದೇಶವಾಸಿಗಳು ಮೋದಿ ಅವರನ್ನೇ ಮತ್ತೆ ಪ್ರಧಾನಮಂತ್ರಿಯನ್ನಾಗಿ ಮಾಡಲು ಮನಸು ಮಾಡಬೇಕು ಎಂದು ಮನವಿ ಮಾಡಿ ಕೊಂಡಿದ್ದಾರೆ.

ಅಫ್ತಾಬ್ ಮುಂಬೈನಿಂದ ಶ್ರದ್ಧಾ ಬೆಹೆನ್ ಸಹೋದರಿಯನ್ನು ಕರೆತಂದು ಲವ್ ಜಿಹಾದ್ ಹೆಸರಿನಲ್ಲಿ 35 ತುಂಡುಗಳಾಗಿ ಕತ್ತರಿಸಿ, ಮೃತದೇಹವನ್ನು ಫ್ರಿಡ್ಜ್ ನಲ್ಲಿಟ್ಟು, ಇನ್ನೊಬ್ಬ ಮಹಿಳೆಯನ್ನು ಕರೆತಂದು ಡೇಟಿಂಗ್ ಮಾಡುತ್ತಿದ್ದ ಎಂದರೆ ಆತ ಇನ್ನೆಷ್ಟು ಕ್ರೂರಿ ಇರಬೇಕು ನೀವೇ ಊಹಿಸಿ, ಅಂತರಹ ಸಮಾಜಘಾತುಕ ಶಕ್ತಿಗಳಿಂದ ನಾವು ಬಚಾವ್ ಆಗಬೇಕಾದರೆ ಮೋದಿಯಂತಹ ನಾಯಕರು ಇರಬೇಕು ಎಂದು ತಿಳಿಸಿದ್ದಾರೆ.