Thursday, 19th December 2024

Assam Unrest : ಪ್ರತಿಭಟನೆ ವೇಳೆ ಅಶ್ರುವಾಯು ಪ್ರಯೋಗ- ಕಾಂಗ್ರೆಸ್ ಕಾರ್ಯಕರ್ತ ಸಾವು, ಹಲವರಿಗೆ ಗಾಯ

Assam Unrest

ಇಂಫಾಲ್‌ : ಮಣಿಪುರದ ಅಶಾಂತಿ ಮತ್ತು ಅದಾನಿ ಗ್ರೂಪ್ (Adani Group) ವಿರುದ್ಧದ ಲಂಚದ ಆರೋಪ ಸೇರಿದಂತೆ ವಿವಿಧ ವಿಷಯಗಳ ವಿರುದ್ಧ ಅಸ್ಸಾಂನ ಗುವಹಟಿಯಲ್ಲಿ ಬುಧವಾರ ನಡೆದ ಪ್ರತಿಭಟನೆಯಲ್ಲಿ ಅಶ್ರುವಾಯು ಶೆಲ್ ಹೊಗೆಯಿಂದ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಮೃತಪಟ್ಟಿದ್ದರೆ (Congress Worker Death), ಹಲವರು ಗಾಯಗೊಂಡಿದ್ದಾರೆ ಎಂದು ಪಕ್ಷ ಹೇಳಿದೆ. (Assam Unrest) ಆದರೆ, ಘಟನೆಯನ್ನು ಅಲ್ಲಗೆಳೆದಿರುವ ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ ಎಂದು ತಿಳಿಸಿದ್ದಾರೆ.

ಪೊಲೀಸರು ಮತ್ತು ಕಾಂಗ್ರೆಸ್ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದಿದ್ದು, ಅಸ್ಸಾಂ ಕಾಂಗ್ರೆಸ್ ಮುಖ್ಯಸ್ಥ ಭೂಪೇನ್ ಕುಮಾರ್ ಬೋರಾ ಮತ್ತು ಮಾಜಿ ರಾಜ್ಯಸಭಾ ಸಂಸದ ರಿಪುನ್ ಬೋರಾ ನೆಲದ ಮೇಲೆ ಬಿದ್ದು ಹೊರಳಾಡಿ ಪ್ರತಿಭಟನೆ ನಡೆಸಿದ್ದಾರೆ. ನಂತರ ಅವರನ್ನು ಬಂಧಿಸಿ ನಂತರ ಅವರನ್ನು ಬಿಡುಗಡೆ ಮಾಡಲಾಗಿದೆ.

ಕಾಂಗ್ರೆಸ್ ಲೀಗಲ್ ಸೆಲ್ ಸದಸ್ಯ ಅಡ್ವೊಕೇಟ್ ಮೃದುಲ್ ಇಸ್ಲಾಂ (45) ಅವರ ಬಳಿ ಅಶ್ರುವಾಯು ಸೆಲ್ ಬಿದ್ದಾಗ ಉಸಿರುಗಟ್ಟಿದ ಅನುಭವಾಗಿ ಅವರು ಮೃತಪಟ್ಟಿದ್ದಾರೆ ಎಂದು ಪಕ್ಷದ ವಕ್ತಾರ ಬೇಡಬ್ರತ್ ಬೋರಾ ಹೇಳಿದ್ದಾರೆ. ತಕ್ಷಣ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಗೌಹಾಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (GMCH) ಸಾಗಿಸಲಾಯಿತು. ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು ಎಂದು ಅವರು ಹೇಳಿದರು.

ಹಿರಿಯ ಪತ್ರಕರ್ತ ಅಮರೇಂದ್ರ ದೇಕಾ ಮತ್ತು ಅವರ ಕ್ಯಾಮರಾ ಮ್ಯಾನ್‌ ಸೇರಿದಂತೆ ಹಲವಾರು ಮಾಧ್ಯಮದವರು ಗಾಯಗೊಂಡಿದ್ದು, ಜಿಎಂಸಿಎಚ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕಾಂಗ್ರೆಸ್ ವಕ್ತಾರರು ತಿಳಿಸಿದ್ದಾರೆ. ಸುಮಾರು 10 ಜನರು ಗಾಯಗೊಂಡಿದ್ದಾರೆ ಮತ್ತು ಅವರು GMCH ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನನ್ನ ರಾಜಕೀಯ ಜೀವನದಲ್ಲಿ, ಇಂತಹ ಘಟನೆಯನ್ನು ನೋಡಿಲ್ಲ ಎಂದು ಅವರು ಹೇಳಿದ್ದಾರೆ.

GMCH ಗೆ ಭೇಟಿ ನೀಡಿದ ನಂತರ ಗುವಾಹಟಿ ಪೊಲೀಸ್ ಕಮಿಷನರ್ ದಿಗಂತ ಬರಾಹ್, “ಅಶ್ರುವಾಯು ಶೆಲ್‌ಗಳನ್ನು ಹಾರಿಸಲಾಗಿಲ್ಲ, ಪೊಲೀಸರು ಕೇವಲ ಮೂರು ಶೆಲ್‌ಗಳನ್ನು ರಸ್ತೆಯ ಮೇಲೆ ಉರುಳಿಸಿದ್ದಾರೆ ಇದರಿಂದ ಹೊಗೆ ಹೊರಬರುತ್ತದೆ ಎಂದು ಹೇಳಿದ್ದಾರೆ. ನಾವು ಸಾಕಷ್ಟು ಸಂಖ್ಯೆಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದ್ದೇವೆ ಮತ್ತು ಮೂರು ಬ್ಯಾರಿಕೇಡ್‌ಗಳನ್ನು ನಿರ್ಮಿಸಿದ್ದೇವೆ. ಪ್ರತಿಭಟನಾಕಾರರು ಎರಡು ಬ್ಯಾರಿಕೇಡ್‌ಗಳನ್ನು ಮುರಿದು ಮೂರನೇ ಬ್ಯಾರಿಕೇಡ್‌ಗೆ ಹೋದರು. ಯಾವುದೇ ಲಾಠಿ ಚಾರ್ಜ್ ಅಥವಾ ಬಲವನ್ನು ಬಳಸಲಿಲ್ಲ. ನಾವು ಮಾತ್ರ ಅಶ್ರುವಾಯು ಶೆಲ್‌ಗಳನ್ನು ಉರುಳಿಸಿದ್ದೇವೆ” ಎಂದು ಬರಾಹ್ ಹೇಳಿದರು. ಮೃತನ ಮೇಲೆ ನಡೆಸಿದ ಮ್ಯಾಜಿಸ್ಟ್ರೇಟ್ ವಿಚಾರಣೆಯಲ್ಲಿ ಯಾವುದೇ ಬಾಹ್ಯ ಗಾಯ ಕಂಡುಬಂದಿಲ್ಲ ಮತ್ತು “ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವೇ ನಿಖರವಾದ ಕಾರಣ ತಿಳಿಯುತ್ತದೆ” ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ : Supreme Court: ಆದೇಶ ಉಲ್ಲಂಘಿಸಿ ʼಬುಲ್ಡೋಜರ್ ನ್ಯಾಯʼ ಜಾರಿ; ಅಸ್ಸಾಂ ಸರ್ಕಾರಕ್ಕೆ ಚಾಟಿ ಬೀಸಿದ ಸುಪ್ರೀಂ ಕೋರ್ಟ್‌