Friday, 22nd November 2024

ಶಿಕ್ಷಕರಿಗೆ ಡ್ರೆಸ್ ಕೋಡ್ ಕಡ್ಡಾಯ: ಅಸ್ಸಾಂ ಸರ್ಕಾರ ಆದೇಶ

ಗುವಾಹಟಿ: ರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕರಿಗೆ ಡ್ರೆಸ್ ಕೋಡ್ ಕಡ್ಡಾಯ ಗೊಳಿಸಿ ಅಸ್ಸಾಂ ಸರ್ಕಾರ ಆದೇಶ ಹೊರಡಿಸಿದೆ. ಶಾಲೆಗಳಲ್ಲಿ ಶಿಕ್ಷಕರು ಟೀ ಶರ್ಟ್, ಜೀನ್ಸ್ ಮತ್ತು ಮಹಿಳಾ ಶಿಕ್ಷಕಿಯರು ಲೆಗ್ಗಿಂಗ್ ಧರಿಸುವುದನ್ನು ನಿಷೇಧಿಸಿದೆ.

ಈ ಕುರಿತು ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಅಷ್ಟರ ಮಟ್ಟಿಗೆ ಶಿಕ್ಷಕರು ವಿನಮ್ರ ಉಡುಪು ಧರಿಸುವುದು ಅಗತ್ಯ. ಅದಕ್ಕಾಗಿ ಶಿಕ್ಷಕರು ವಸ್ತ್ರ ಸಂಹಿತೆ ಅನುಸರಿಸಬೇಕು.

ಕೆಲವು ಶಿಕ್ಷಕರು ಅವರು ಇಷ್ಟಪಡುವದನ್ನು ಧರಿಸಿ ಶಾಲೆಗಳಿಗೆ ಬರುತ್ತಾರೆ, ಅದು ಕೆಲ ವೊಮ್ಮೆ ಸ್ವೀಕಾರಾರ್ಹವಲ್ಲ ಎಂದು ಹೇಳಿದೆ. ಶಾಲೆಗಳು ತಮ್ಮ ಕರ್ತವ್ಯಗಳನ್ನು ನಿರ್ವಹಿ ಸುವಾಗ ವೃತ್ತಿಪರವಾಗಿ ಉಡುಗೆ ಮಾಡಬೇಕು ಎಂದು ಸೂಚಿಸಲಾಗಿದೆ. ಕ್ಯಾಶುಯಲ್ ಮತ್ತು ಪಾರ್ಟಿ ವೇರ್ ಅನ್ನು ತಪ್ಪಿಸಬೇಕು.

ಇನ್ನು ಮುಂದೆ ಪುರುಷ ಶಿಕ್ಷಕರು ಔಪಚಾರಿಕ ಶರ್ಟ್ ಮತ್ತು ಪ್ಯಾಂಟ್ ಧರಿಸುವಂತೆ ಸೂಚನೆ ನೀಡಲಾಗಿದ್ದು, ಮಹಿಳಾ ಶಿಕ್ಷಕರು ಸಲ್ವಾರ್ ಸೂಟ್ ಅಥವಾ ಸೀರೆಯಂತಹ ಫಾರ್ಮಲ್ ಬಟ್ಟೆಗಳನ್ನು ಧರಿಸಿ ಶಾಲೆಗಳಿಗೆ ಬರಬೇಕು. ವಸ್ತ್ರ ಸಂಹಿತೆ ಪಾಲಿಸದಿದ್ದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿದೆ.