Friday, 22nd November 2024

ಅಸ್ಸಾಂ ಸರ್ಕಾರದಿಂದ ಸಾಂದರ್ಭಿಕ ರಜೆ ಮಂಜೂರು

ಗುವಾಹಟಿ: ಕುಟುಂಬದೊಂದಿಗೆ ಕಾಲ ಕಳೆಯಲು ಅನುಕೂಲವಾಗುವಂತೆ ಅಸ್ಸಾಂ ಸರ್ಕಾರ, ನೌಕರರು, ಶಾಸಕರು ಹಾಗೂ ಸಚಿವರುಗಳಿಗೆ ಎರಡು ದಿನಗಳ ಹೆಚ್ಚುವರಿ ಸಾಂದರ್ಭಿಕ ರಜೆ ಮಂಜೂರು ಮಾಡಿದೆ.

‘ಮಾತೃ – ಪಿತೃ ವಂದನಾ’ ಯೋಜನೆ ಅಡಿಯಲ್ಲಿ ಈ ರಜೆಯನ್ನು ಘೋಷಿಸಲಾಗಿದ್ದು, ಫೆ9 ಹಾಗೂ 10 ರಂದು ರಜೆ ಇರಲಿದೆ.

ಜೊತೆಗೆ ಫೆ.11 ಎರಡನೇ ಶನಿವಾರವಾಗಿದ್ದು, ಫೆ.12 ಭಾನುವಾರವಾಗಿರುವುದರಿಂದ ಒಟ್ಟು ನಾಲ್ಕು ದಿನಗಳ ಕಾಲ ರಜೆ ಸಿಕ್ಕಂತಾಗಲಿದೆ.