Thursday, 12th December 2024

ವಿಶೇಷ ಚಹಾ ಪ್ರತಿ ಕೆ.ಜಿ.ಗೆ 99,999 ರೂ.ಗಳಿಗೆ ಹರಾಜು

Assam’s Manohari Gold Tea

ನವದೆಹಲಿ : ಅಸ್ಸಾಂನ ದಿಬ್ರುಘರ್ ಜಿಲ್ಲೆಯಲ್ಲಿ ಡಿ.14ರಂದು ವಿಶೇಷ ಚಹಾವನ್ನ ಪ್ರತಿ ಕೆ.ಜಿ.ಗೆ 99,999 ರೂ.ಗಳಿಗೆ ಹರಾಜು ಮಾಡಲಾಯಿತು.

ಗುವಾಹಟಿ ಸಗಟು ವ್ಯಾಪಾರಿ ಸೌರಭ್ ಟೀ ಟ್ರೇಡರ್ಸ್ ಈ ಚಹಾಕ್ಕಾಗಿ ಬಿಡ್ ಮಾಡಿದ್ದು, ಅದನ್ನ ಗೆದ್ದಿದ್ದಾರೆ.

ಗುವಾಹಟಿ ಚಹಾ ಹರಾಜು ಕೇಂದ್ರ ಕಾರ್ಯದರ್ಶಿ ಪ್ರಿಯನುಜ್ ದತ್ತಾ ಅವರು ಮನೋಹರಿ ಟೀ ಗಾರ್ಡನ್ ತನ್ನ ‘ಮನೋಹರಿ ಗೋಲ್ಡ್’ ವೈವಿಧ್ಯಮಯ ಚಹಾ ವನ್ನು ಸೌರಭ್ ಚಹಾ ವ್ಯಾಪಾರಿಗಳಿಗೆ 99,999ರೂ.ಗಳಿಗೆ ಮಾರಾಟ ಮಾಡಿದೆ ಎಂದು ಹೇಳಿದರು. ದತ್ತಾ ಅವರು, ‘ದೇಶದಲ್ಲಿ ಚಹಾ ಮಾರಾಟ ಮತ್ತು ಖರೀದಿ ಯಲ್ಲಿ ಇದು ವರೆಗಿನ ಗರಿಷ್ಠ ಹರಾಜು ಬೆಲೆಯಾಗಿದೆ’ ಎಂದು ಹೇಳಿದರು.

ಮನೋಹರಿ ಟೀ ಎಸ್ಟೇಟ್ʼನ ಮಾಲೀಕ ರಾಜನ್ ಲೋಹಿಯಾ, ಪ್ರೀಮಿಯಂ ಗುಣಮಟ್ಟದ ವಿಶೇಷ ಚಹಾ ಗಳಿಗಾಗಿ ಗ್ರಾಹಕರು ಮತ್ತು ವಿವೇಚನಾಶೀಲ ಜನರ ಹೆಚ್ಚಿನ ಬೇಡಿಕೆಯ ಆಧಾರದ ಮೇಲೆ ನಾವು ಚಹಾವನ್ನ ತಯಾರಿಸುತ್ತೇವೆ’ ಎಂದು ಹೇಳಿದರು.

ಜುಲೈ 2019ರಲ್ಲಿ ನಡೆದ ಜಿಟಿಎಸಿ ಹರಾಜಿನಲ್ಲಿ ಮನೋಹರಿ ಗೋಲ್ಡ್ ಟೀ ಪ್ರತಿ ಕೆ.ಜಿ.ಗೆ 50,000 ರೂ.ಗಳಿಗೆ ಮಾರಾಟವಾಯಿತು. ಇದು ಅತಿ ಹೆಚ್ಚಿನ ಹರಾಜು ಬೆಲೆಯಾಗಿತ್ತು. ಅರುಣಾಚಲ ಪ್ರದೇಶದ ಡೋನಿ ಪೋಲೊ ಟೀ ಎಸ್ಟೇಟ್ ನಿರ್ಮಿಸಿದ ಗೋಲ್ಡನ್ ನೂಡಲ್ಸ್ ಟೀ ಮತ್ತು ಅಸ್ಸಾಂನ ಡಿಕೋನ್ ಟೀ ಎಸ್ಟೇಟ್ ನ ‘ಗೋಲ್ಡನ್ ಬಟರ್ ಫ್ಲೈ ಟೀ’ ಜಿಟಿಎಸಿಯ ಪ್ರತ್ಯೇಕ ಹರಾಜಿನಲ್ಲಿ ಪ್ರತಿ ಕೆ.ಜಿ.ಗೆ 75,000 ರೂ.ಗಳಿಗೆ ಮಾರಾಟವಾದಾಗ ಒಂದು ತಿಂಗಳೊಳಗೆ ಈ ದಾಖಲೆ ಮುರಿಯಲಾಯಿತು.