Wednesday, 9th October 2024

ಅಟಲ್ ಸುರಂಗ ಮಾರ್ಗ ಉದ್ಘಾಟನೆಗೆ ಕೌಂಟ್’ಡೌನ್

ಶಿಮ್ಲಾ : ವಿಶ್ವದ ಅತಿ ಉದ್ದವಾದ ಹೆದ್ದಾರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹಿಮಾಚಲ ಪ್ರದೇಶದ ಅಟಲ್ ಸುರಂಗ ಮಾರ್ಗವನ್ನು ನಾಳೆ ಪ್ರಧಾನಿ ನರೇಂದ್ರ ಮೋದಿ ಉದ್ಧಾಟಿಸಲಿದ್ದಾರೆ.

ಈ ಸುರಂಗವು ಮನಾಲಿ ಮತ್ತು ಲೇಹ್ ನಡುವಿನ ಅಂತರವನ್ನು 46 ಕಿಮೀ ಕಡಿಮೆ ಮಾಡಲಿದೆ. ಹಾಗೂ ನಾಲ್ಕು ಗಂಟೆಗಳ ಪ್ರಯಾಣದ ಅವಧಿ ಸಹ ಉಳಿತಾಯವಾಗಲಿದೆ. ನಾಳೆ ಪ್ರಧಾನಿ ಮೋದಿ ಮನಾಲಿಗೆ ಭೇಟಿ ನೀಡುತ್ತಿದ್ದು, ಬಳಿಕ ಲಾಹೌಲ್ ಗೆ ಭೇಟಿ ನೀಡಲಿದ್ದಾರೆ.

ಬರೋಬ್ಬರಿ 10 ಸಾವಿರ ಅಡಿಗಿಂತ ಹೆಚ್ಚು ಉದ್ದವಾಗಿರುವ ವಿಶ್ವದ ಅತಿ ಉದ್ದವಾದ ಹೆದ್ದಾರಿ ಎಂಬ ಹೆಗ್ಗಳಿಕೆಗೆ ಅಟಲ್ ಸುರಂಗ ಮಾರ್ಗ ಪಾತ್ರವಾಗಿದೆ