Sunday, 15th December 2024

ಅಟಲ್​ ಸುರಂಗ ಮಾರ್ಗ ಲೋಕಾರ್ಪಣೆಗೆ ಕ್ಷಣಗಣನೆ

ಶಿಮ್ಲಾ: ಕುದುರೆ ಲಾಳದ ಆಕಾರದ ಅಟಲ್​ ಸುರಂಗ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಲೋಕಾರ್ಪಣೆ ಗೊಳಿಸಲಿದ್ದಾರೆ.

ಹಿಮಾಲಚ ಪ್ರದೇಶದ ರೋಹ್ಟಾಂಗ್​ನಲ್ಲಿ ನಿರ್ಮಿಸಲಾಗಿರುವ ಸುರಂಗ ಮಾರ್ಗವೂ ಲೇಹ್​ ಮತ್ತು ಮನಾಲಿ ನಡುವೆ 46 ಕಿ.ಮೀ ಅಂತರವನ್ನು ತಗ್ಗಿಸಲಿದೆ. ಈಗಾಗಲೇ ಪ್ರಧಾನಿ ಅವರು ಸುರಂಗ ಉದ್ಘಾಟನೆಗಾಗಿ ವಿಶೇಷ ವಿಮಾನದಲ್ಲಿ ಮನಾಲಿಗೆ ಆಗಮಿಸಿದ್ದಾರೆ. ಜತೆಯಲ್ಲಿ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಕೂಡ ಇದ್ದಾರೆ.

ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್​ ಠಾಕೂರ್​ ಮಾತನಾಡಿ, ನಾವು ಎಲ್ಲ ರೀತಿಯ ತಯಾರಿಯನ್ನು ಮಾಡಿ ಕೊಂಡಿದ್ದು, ಪ್ರಧಾನಿ ಮೋದಿ ಅವರಿಗೆ ಕಾಯುತ್ತಿದ್ದೇವೆ. ಇದೊಂದು ಐತಿಹಾಸಿಕ ಕ್ಷಣವಾಗಿದೆ. ಈ ಸುರಂಗವೂ ರಾಷ್ಟ್ರೀಯ ಭದ್ರತಾ ದೃಷ್ಟಿಕೋನದಿಂದ ಮಹತ್ವ ದ್ದಾಗಿದೆ. ಅಲ್ಲದೆ, ಜನರ ಪ್ರಯಾಣಕ್ಕೂ ಸಹಕಾರಿಯಾಗಿದೆ ಎಂದರು.

ಶುಕ್ರವಾರವಷ್ಟೇ ಅಟಲ್​​ ಸುರಂಗಕ್ಕೆ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಭೇಟಿ ನೀಡಿ, ಉದ್ಘಾಟನಾ ಕಾರ್ಯಕ್ರಮದ ತಯಾರಿ ಯನ್ನು ವೀಕ್ಷಿಸಿದ್ದರು.

ಅಟಲ್​ ಸುರಂಗ ಕುರಿತಾದ ಪ್ರಮುಖಾಂಶಗಳು
1. 2000, ಜೂನ್​ 3ರಂದು ಅಟಲ್​ ಸುರಂಗ ನಿರ್ಮಿಸುವ ತೀರ್ಮಾನವನ್ನು ಅಂದಿನ ಪ್ರಧಾನಿ ವಾಜಪೇಯಿ ತೆಗೆದುಕೊಂಡಿದ್ದರು. 2002, ಮೇ 26ರಂದು ಸುರಂಗ ಮಾರ್ಗಕ್ಕೆ ಶಂಕುಸ್ಥಾಪನೆ ನೇರವೇರಿಸಲಾಗಿತ್ತು.
2. 2019, ಡಿಸೆಂಬರ್​ 25ರಂದು ರೋಹ್ಟಾಂಗ್​ ಸುರಂಗ ಮಾರ್ಗವನ್ನು ಅಟಲ್ ಬಿಹಾರಿ ವಾಜಪೇಯಿ ಸ್ಮರಣಾರ್ಥ ‘ಅಟಲ್​​ ಸುರಂಗ’ ಎಂದು ಮರುನಾಮಕರಣ ಮಾಡಲಾಯಿತು.
3. ಮನಾಲಿಯಿಂದ 25 ಕಿ.ಮೀ ದೂರದಲ್ಲಿ 3,060 ಮೀಟರ್ ಎತ್ತರದಲ್ಲಿ ನಿರ್ಮಾಣವಾಗಿದೆ.
4. ಸುರಂಗವೂ ಸುಮಾರು 9.02 ಕಿ.ಮೀ ಉದ್ದವಿದೆ. ಅಲ್ಟ್ರಾ-ಮಾಡರ್ನ್​ ವಿಶೇಷತೆಗಳಿಂದ ಹಿಮಾಲಯದ ಪಿರ್​ ಪಂಜಲ್​ ಶ್ರೇಣಿಯಲ್ಲಿ ನಿರ್ಮಿಸಲಾಗಿದೆ.
5. ಇದು ಮನಾಲಿ ಮತ್ತು ಲೇಹ್​ ನಡುವೆ 46 ಕಿ.ಮೀ ಅಂತರವನ್ನು ತಗ್ಗಿಸಲಿದ್ದು, ಪ್ರಯಾಣದ ದೂರ 4 ರಿಂದ 5 ಗಂಟೆ ತೆಗೆದುಕೊಳ್ಳಲಿದೆ.
6. ಸಿಂಗಲ್​ ಟ್ಯೂಬ್ ಡಬಲ್ ಲೇನ್ ಸುರಂಗವು 8 ಮೀಟರ್ ರಸ್ತೆಮಾರ್ಗವನ್ನು ಹೊಂದಿದೆ ಮತ್ತು 5.525 ಮೀಟರ್ ಓವರ್​ ಹೆಡ್​ ಕ್ಲಿಯರೆನ್ಸ್ ಹೊಂದಿದೆ.
7. ಗಂಟೆಗೆ ಗರಿಷ್ಠ 80 ಕಿ.ಮೀ ವೇಗದಲ್ಲಿ ದಿನಕ್ಕೆ 3,000 ಕಾರುಗಳು ಮತ್ತು 1,500 ಟ್ರಕ್‌ಗಳ ಸಂಚಾರ ಸಾಂದ್ರತೆಗಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ.
8. ಸುರಂಗವೂ 10.5 ಮೀಟರ್​ ಅಗಲವಿದೆ ಮತ್ತು 3.6 X 2.25 ಮೀಟರ್​ ಅಗ್ನಿ ನಿರೋಧಕ ತುರ್ತು ಪ್ರಗತಿ ಸುರಂಗವನ್ನು ಮುಖ್ಯ ಸುರಂಗದಲ್ಲಿಯೇ ನಿರ್ಮಿಸಲಾಗಿದೆ.