Thursday, 19th September 2024

ದಿನೇಶ್ ಗುಂಡೂರಾವ್ ವಾಹನದ ಮೇಲೆ ಕಾರ್ಯಕರ್ತರ ದಾಳಿ

ಪುದುಚೇರಿ: ಪಾಂಡಿಚೇರಿ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಸಭೆಗೆ ಬಂದಿದ್ದ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಾಹನದ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ದಾಳಿ ನಡೆಸಿದ್ದಾರೆ.

ಪುದುಚೇರಿ ಕಾಂಗ್ರೆಸ್ ಉಸ್ತುವಾರಿ ಆಗಿರುವ ದಿನೇಶ್ ಗುಂಡೂರಾವ್ ಅವರು, ಕಾಂಗ್ರೆಸ್‌ ಕಚೇರಿ ಸಭೆ ನಡೆದಿತ್ತು. ಈ ಸಭೆಗೆ ಅವರು ಆಗಮಿಸಿದ್ದರು. ಮಾಜಿ ಸಚಿವರೊಬ್ಬರನ್ನ ಬೆಂಬಲಿಸುವ ಬಣ ನಾಯಕತ್ವ ಬದಲಾವಣೆಗೆ ಆಗ್ರಹಿಸಿ ಧರಣಿ ನಡೆಸುತ್ತಿತ್ತು.

ಈ ವೇಳೆ ಸಭೆ ಮುಗಿಸಿ ಹೊರಬರುತ್ತಿದ್ದಂತೆಯೇ ಕಾಂಗ್ರೆಸ್ ಕಾರ್ಯಕರ್ತರು ದಿನೇಶ್ ಗುಂಡೂರಾವ್ ಅವರನ್ನು ಸುತ್ತುವರಿದು ತಳ್ಳಾಡಿ ಗಲಾಟೆ ಮಾಡಿದ್ದಾರೆ. ಅಲ್ಲದೇ ಕಾರಿಗೆ ಹತ್ತದಂತೆ ತಡೆದು ಮುತ್ತಿಗೆ ಹಾಕಿದ್ದಾರೆ. ನಾಯಕತ್ವ ಬದಲಾವಣೆ ಕುರಿತು ಉತ್ತರ ನೀಡುವಂತೆ ಕಾರ್ಯಕರ್ತರ ಒತ್ತಾಯಿಸಿದ್ದಾರೆ.