Saturday, 14th December 2024

ಆಕ್ಸಿಸ್ ಬ್ಯಾಂಕ್‌ನಲ್ಲಿ 15 ಲಕ್ಷ ರೂ. ದರೋಡೆ

ಭೋಜಪುರ: ಆಕ್ಸಿಸ್ ಬ್ಯಾಂಕ್‌ನಲ್ಲಿ 15 ಲಕ್ಷ ರೂಪಾಯಿ ದರೋಡೆ ಮಾಡಲಾಯಿತು. 7 ರಿಂದ 8 ಮಂದಿ ಕಳ್ಳರು ಗ್ರಾಹಕರಂತೆ ನಟಿಸಿ ಬ್ಯಾಂಕ್‌ಗೆ ನುಗ್ಗಿ, ಬ್ಯಾಂಕ್‌ನ ಬಾಗಿಲನ್ನು ಮುಚ್ಚಿ 12 ಮಂದಿ ಬ್ಯಾಂಕ್‌ ನೌಕರರನ್ನು ಒತ್ತೆಯಾಳಾಗಿ ಇರಿಸಿಕೊಂಡರು.

ಈ ಸಂದರ್ಭದಲ್ಲಿ ಉದ್ಯೋಗಿಯೊಬ್ಬರು ತುರ್ತು ಗಂಟೆ (ಸೈರನ್) ಬಾರಿಸಿದರು. 15 ನಿಮಿಷಗಳ ನಂತರ ಪೊಲೀಸರು ಬ್ಯಾಂಕ್ ತಲುಪಿದರು. ಆದರೆ ಕಳ್ಳರು ಅದಕ್ಕೂ ಮುನ್ನ ಬ್ಯಾಂಕ್ ನಲ್ಲಿದ್ದ 15 ಲಕ್ಷ ರೂಪಾಯಿಗಳನ್ನು ದೋಚಿ ಪರಾರಿಯಾಗಿದ್ದಾರೆ. ವಿಶೇಷ ಎಂದರೆ 150ಕ್ಕೂ ಹೆಚ್ಚು ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಬ್ಯಾಂಕ್ ಅನ್ನು ಸುತ್ತುವರೆದು ದರೋಡೆಕೋರರಿಗೆ ಶರಣಾಗುವಂತೆ ಮನವಿ ಮಾಡಿದರು.

ಆದರೆ ಪೊಲೀಸರು ಬರುವ 1 ನಿಮಿಷ ಮೊದಲೇ ದರೋಡೆಕೋರರು ಪಲಾಯನ ಮಾಡಿದ್ದರು.