Sunday, 28th April 2024

ಅಯೋಧ್ಯೆಯಲ್ಲಿ ದೀಪೋತ್ಸವಕ್ಕೆ 24 ಲಕ್ಷ ದೀಪ ಬೆಳಗಲು ಸಿದ್ಧತೆ

ಅಯೋಧ್ಯಾ: ಅಯೋಧ್ಯೆಯಲ್ಲಿ 2024ರ ಜನವರಿಯಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಪ್ರಾಣ ಪ್ರತಿಷ್ಠೆ ನಡೆಯಲಿದೆ.

ಮುಂದಿನ ವರ್ಷ ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಲಲ್ಲಾನ ಮಂದಿರ ಲೋಕಾರ್ಪಣೆಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​, ಆರ್.​ಎಸ್.​ಎಸ್​ ಸರಸಂಘಚಾಲಕ್​ ಮೋಹನ್​ ಭಾಗವತ್​ ಸೇರಿದಂತೆ ಗಣ್ಯಾತಿಗಣ್ಯರು ಭಾಗ ವಹಿಸಲಿದ್ದಾರೆ.

ದೀಪಾವಳಿ ಹಿನ್ನೆಲೆ ಅಯೋಧ್ಯೆಯಲ್ಲಿನ 51 ಘಾಟ್​ಗಳಲ್ಲಿ 24 ಲಕ್ಷಕ್ಕೂ ಅಧಿಕ ದೀಪಗಳನ್ನು ಬೆಳಗಲು ಸಿದ್ಧತೆ ನಡೆಸಲಾಗಿದೆ. ದೀಪೋತ್ಸವ ಸಂಬಂಧ ರಾಮ ಜನ್ಮಭೂಮಿ ಪಥವನ್ನು ಹೂವುಗಳಿಂದ ಅಲಂಕಾರಗೊಳಿಸಲಾಗಿದೆ. ಸುಮಾರು 24 ಲಕ್ಷಕ್ಕೂ ಅಧಿಕ ಮಣ್ಣಿನ ದೀಪಗಳಿಂದ ದೀಪೋತ್ಸವ ಆಚರಿಸಲಾಗುತ್ತಿದ್ದು, ಈ ಮೂಲಕ ಗಿನ್ನೆಸ್​ ದಾಖಲೆ ಬರೆಯಲು ಮುಂದಾಗಿದೆ. ದೀಪೋತ್ಸವದ ಶೋಭಾಯಾತ್ರೆ ಆರಂಭಗೊಂಡಿದ್ದು, ಈ ವೇಳೆ ಮಹಿಳೆ ಯರು ಸಾಂಪ್ರದಾಯಿಕ ಉಡುಪು ತೊಟ್ಟು ನೃತ್ಯ ಮಾಡಿದರು. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಭಾಗಿಯಾಗಿವೆ.

ಈ ಬುಡಕಟ್ಟು ಜನಾಂಗದವರು ಜಾರ್ಖಂಡ್​ನ ಗುಡ್ಡಗಾಡುಗಳಲ್ಲಿ ವಾಸ ಮಾಡುತ್ತಾರೆ. ದೀಪೋತ್ಸವ ಆಚರಿಸಲು ಬರಿಗಾಲಿನಲ್ಲಿ ಅಯೋಧ್ಯೆಗೆ ಆಗಮಿಸಿದ್ದಾರೆ. ಜಾರ್ಖಂಡ್​​ ಪ್ರದೇಶ್ ಶ್ರೀರಾಮ ಜಾನಕಿ ಚಾರಿಟೇಬಲ್ ಟ್ರಸ್ಟ್​ ಬುಡಕಟ್ಟು ಜನಾಂಗದವರನ್ನು ದೀಪೋತ್ಸವದಲ್ಲಿ ಕರೆತಂದಿದೆ. ನಾಳೆ ಬುಡಕಟ್ಟು ಜನರು ಸಿಎಂ ಯೋಗಿ ಆದಿತ್ಯನಾಥ್​ ಜೊತೆಯಲ್ಲಿ ದೀಪೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಈ ವೇಳೆ ಬುಡಕಟ್ಟು ಜನಾಂಗದವರು ಅವರ ಸಾಂಪ್ರದಾಯಿಕ ಉಡುಪನ್ನು ಧರಿಸಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!