ಅಯೋಧ್ಯೆ: ಮಹಾರಾಷ್ಟ್ರ ಮುಖ್ಯಮಂತ್ರಿ, ಶಿವಸೇನೆ ನಾಯಕ ಏಕನಾಥ್ ಶಿಂದೆ ಭಾನುವಾರ ಉತ್ತರ ಪ್ರದೇಶದ ಅಯೋಧ್ಯೆಗೆ ಭೇಟಿ ನೀಡಿದ್ದಾರೆ.
ಶಿವಸೇನೆಯ ಸಂಸದರು, ಉಪಮುಖ್ಯಮಂತ್ರಿ, ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಕೂಡ ಇದ್ದಾರೆ. ಶನಿವಾರವೇ ಲಖನೌಗೆ ಆಗಮಿಸಿದ್ದ ಏಕನಾಥ್ ಶಿಂಧೆ ಇಂದು ಅಯೋ ಧ್ಯೆಗೆ ತೆರಳುವ ವೇಳೆ ಶಿವಸೇನೆಯ ಸಾವಿರಾರು ಕಾರ್ಯಕರ್ತರು/ಬೆಂಬಲಿಗರು ನೆರೆದಿದ್ದರು. ಥೇಟ್ ಒಂದು ರೋಡ್ ಶೋ ಆದಂತೆ ಆಗಿದೆ.
ಏಕನಾಥ್ ಶಿಂಧೆಯವರು 2018ರಲ್ಲಿ ಒಮ್ಮೆ ಅಯೋಧ್ಯೆ ಶ್ರೀರಾಮಜನ್ಮಭೂಮಿಗೆ ಭೇಟಿ ಕೊಟ್ಟಿದ್ದರು. ಆಗಿನ್ನೂ ಸುಪ್ರೀಂಕೋರ್ಟ್ ಅಲ್ಲಿ ರಾಮಮಂದಿರ ನಿರ್ಮಾಣದ ತೀರ್ಪು ಕೊಟ್ಟಿರಲಿಲ್ಲ. ಅದಾದ ಮೇಲೆ 2020ರಲ್ಲಿ ಒಮ್ಮೆ ಅಲ್ಲಿಗೆ ಹೋಗಿದ್ದರು.
ಸಿಎಂ ಏಕನಾಥ್ ಶಿಂಧೆ, ‘ನಾನಿಂದು ಅಯೋಧ್ಯೆಗೆ ಭೇಟಿ ನೀಡಿ, ಶ್ರೀರಾಮನ ದರ್ಶನ ಪಡೆಯುತ್ತೇನೆ. ಶಿವಸೇನೆಯ ಚಿಹ್ನೆಯಾದ ಬಿಲ್ಲು-ಬಾಣ ನಮ್ಮ ಬಣಕ್ಕೆ ಸಿಕ್ಕಿದೆ. ಹೀಗಾಗಿ ಶ್ರೀರಾಮನ ಅನುಗ್ರಹ ನಮ್ಮ ಮೇಲಿದೆ ಎಂದೇ ಅರ್ಥ’ ಎಂದು ಹೇಳಿದ್ದಾರೆ.
ಅಯೋಧ್ಯೆ ತಲುಪಿರುವ ಏಕನಾಥ್ ಶಿಂಧೆ, ಸಂಜೆ ಸರಯೂ ನದಿ ತೀರದಲ್ಲಿ ನಡೆಯಲಿ ರುವ ಮಹಾ ಆರತಿಯಲ್ಲಿ ಪಾಲ್ಗೊಳ್ಳ ಲಿದ್ದಾರೆ. ಹಾಗೇ, ದೇವಸ್ಥಾನ ನಿರ್ಮಾಣ ಕಾಮಗಾರಿ ಯನ್ನು ಪರಿಶೀಲಿಸಲಿದ್ದಾರೆ.
ಶಿವಸೇನೆಯ ಸಂಸ್ಥಾಪಕ ಬಾಳಾ ಸಾಹೇಬ್ ಠಾಕ್ರೆಯವರಿಗೆ ಶ್ರೀರಾಮ ಮಂದಿರ ನಿರ್ಮಾಣ ಬಹುದೊಡ್ಡ ಕನಸಾಗಿತ್ತು ಎಂದು ಹೇಳಿರುವ ಏಕನಾಥ್ ಶಿಂಧೆ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನ ಲಖನೌದಲ್ಲಿ ಈಗಾಗಲೇ ಭೇಟಿ ಮಾಡಿದ್ದಾರೆ. ನಾನು ಅಯೋಧ್ಯೆಗೆ ಬಂದಿರುವುದು ಯಾವುದೇ ರಾಜಕೀಯ ಕಾರಣಕ್ಕಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.