ಭೋಪಾಲ್: ಆಯುಷ್ಮಾನ್ ಯೋಜನೆಯ ಲಾಭ ಪಡೆದು ಸುನಿತಾ ಅನ್ನು ವವರು, ಕಳೆದುಕೊಂಡಿರುವ ಶ್ರವಣಶಕ್ತಿಯನ್ನ ಮತ್ತೆ ಮರಳಿ ಪಡೆದಿದ್ದಾರೆ.
ಮಧ್ಯಪ್ರದೇಶದ ಖರಗೋನ್ ಜಿಲ್ಲೆಯ ಬಳಿ ಇರುವ, ಝಿರನಯಾ ಜನಪದ ಪಂಚಾಯತ್ ಅಡಿಯಲ್ಲಿ ಇರುವ ಪುಟ್ಟ ಕ್ಷೇತ್ರ ಟೊಪಲಿ ನಂದಿಯಾ. ಅಲ್ಲಿ ವಾಸಿಸುವ ಸುನೀತಾ ಕೇಳುವ ಶಕ್ತಿಯನ್ನ ಕಳೆದುಕೊಂಡಿದ್ದರು. ಆದರೆ 1.5 ಲಕ್ಷ ವೆಚ್ವದ ಕಿವಿಯ ಶಸ್ತ್ರಚಿಕಿತ್ಸೆ ಯನ್ನ ಉಚಿತವಾಗಿ ಮಾಡಿಸಿಕೊಂಡು, ಸ್ಪಷ್ಟವಾಗಿ ಕಿವಿ ಕೇಳಿಸುವ ಸಾಮರ್ಥ್ಯ ಹೊಂದಿ ದ್ದಾರೆ.
ಆಶಾ ಕಾರ್ಯಕರ್ತೆ ಪಿಂಕಿ ಮೂರ, ಸುಮಾರು ಎರಡು ವರ್ಷಗಳ ಹಿಂದೆ ಚುಚ್ಚುಮದ್ದಿನ ಅಭಿಯಾನವೊಂದಕ್ಕಾಗಿ ಸುನೀತಾ ಇದ್ದ ಕ್ಷೇತ್ರಕ್ಕೆ ಹೋಗಿದ್ದರು. ಅಲ್ಲಿ ಸುನೀತಾ ಅವರಿಗೆ, ಕಿವುಡುತನದ ಸಮಸ್ಯೆ ಗೊತ್ತಾದ ತಕ್ಷಣ ಪಿಂಕಿಯವರು ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಸುನೀತಾ ಅವರನ್ನ ಕರೆದುಕೊಂಡು ಹೋಗಿ ವೈದ್ಯರಿಗೆ ತೋರಿಸಿದ್ದಾರೆ.
ಸುನೀತಾ ಅವರನ್ನ ಪರೀಕ್ಷೆ ಮಾಡಿದ ವೈದ್ಯರು. ಇದು ಚಿಕಿತ್ಸೆಯಿಂದ ಸರಿ ಹೋಗುವು ದಿಲ್ಲ, ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.
ಪಿಂಕಿಯವರು, ಭಾರತ ಸರ್ಕಾರವೇ ಈ ರೀತಿಯ ಶಸ್ತ್ರಚಿಕಿತ್ಸೆಯ ವೆಚ್ಚ ಭರಿಸಲಿದೆ. ಆಯುಷ್ಮಾನ್ ಭಾರತ್ ಕಾರ್ಡ್ ಇದ್ದರೆ ಅದರ ಉಪಯೋಗ ಪಡೆಯಬಹುದು ಎಂದು ಹೇಳಿದ್ದಾರೆ. ತಕ್ಷಣವೇ ಸುನೀತಾ ಅವರ ಕುಟುಂಬದವರು ಸುನೀತಾ ಅವರನ್ನ ಇಂದೋರ್‌ನ ಖಾಸಗಿ ಆಸ್ಪತ್ರೆಯಲ್ಲಿ ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಶಸ್ತ್ರಚಿಕಿತ್ಸೆ ಉಚಿತವಾಗಿ ಮಾಡಿಸಿಕೊಂಡಿ ದ್ದಾರೆ. ಈ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು ಸುನೀತಾ ಅವರು ಮತ್ತೆ ಶ್ರವಣಶಕ್ತಿಯನ್ನ ಪಡೆದಿದ್ದಾರೆ.