Wednesday, 9th October 2024

ನ.17 ರಿಂದ ಅಯ್ಯಪ್ಪ ಸ್ವಾಮಿ ದೇಗುಲ ದರ್ಶನ

ಶಬರಿಮಲೆ: ಸ್ವಾಮಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ನವೆಂಬರ್ 17 ರಿಂದ ತೆರೆಯಲಿದೆ.

ಶಬರಿಮಲೆ ದೇವಾಲಯದ ತೀರ್ಥಯಾತ್ರಾ ಕಾಲ 2022 ಡಿಸೆಂಬರ್ 27 ಮಂಡಲ ಪೂಜೆ ಯಿಂದ ಆರಂಭವಾಗಿ ಜನವರಿ 14, 2023ಕ್ಕೆ (ಮಕರ ವಿಳಕ್ಕು) ಕೊನೆಗೊಳ್ಳಲಿದೆ. ಇದನ್ನು ಮಂಡಲ ಪೂಜಾ ಸಮಯ ಎಂದು ಕರೆಯಲಾಗುತ್ತದೆ. ಇದು ಡಿಸೆಂಬರ್ ಮತ್ತು ಜನವರಿಯ 41 ದಿನಗಳವರೆಗೆ ಇರುತ್ತದೆ.

ಮಂಡಲ ಪೂಜಾ (41 ದಿನಗಳು) ಸಮಯದಲ್ಲಿ ಕಟ್ಟುನಿಟ್ಟಾದ ಉಪವಾಸವನ್ನು ಮಾಡಲಾ ಗುತ್ತದೆ. ಆದರೆ ಕೆಲವರು ಕೆಲವು ದಿನಗಳವರೆಗೆ ಮಾತ್ರ ಉಪವಾಸ ಅಥವಾ ತಪಸ್ಸನ್ನು ಆಚರಿಸುತ್ತಾರೆ. ಈ ಸಮಯದಲ್ಲಿ ಮಾಂಸಾಹಾರವನ್ನು ಸೇವಿಸುವುದಿಲ್ಲ. ವಿಶೇಷವಾದ ‘ರುದ್ರಾಕ್ಷ’ ಮಾಲೆಯನ್ನು ಧರಿಸಲಾಗುತ್ತದೆ.

ಮಂಡಲ ಪೂಜೆ ಆರಂಭವಾಗುತ್ತಿದ್ದಂತೆ ಕಟ್ಟುನಿಟ್ಟಾದ ಆಚರಣೆಯನ್ನು ಭಕ್ತರು ಮಾಡುತ್ತಾರೆ. ಸೂರ್ಯೋದಯಕ್ಕಿಂತ ಮೊದಲೇ ತಣ್ಣೀರಿನ ಸ್ನಾನ ಮಾಡುವ ಭಕ್ತರು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತಾರೆ.

ಅಯ್ಯಪ್ಪನ ಅನುಗ್ರಹ ಪಡೆಯಲು ಭಕ್ತಿಯನ್ನು ಅನುಭವಿಸಲು ದಟ್ಟವಾದ ಕಾಡಿನಲ್ಲಿ ಬೆಟ್ಟದ ಹಾದಿಯಲ್ಲಿ ಚಾರಣ ಮಾಡುತ್ತಾರೆ.