ಲಖನೌ: ಸಿತಾಪುರ ಜೈಲಿನಲ್ಲಿರುವ ಸಮಾಜವಾದಿ ಪಕ್ಷದ ಹಿರಿಯ ಮುಖಂಡ ಅಜಂ ಖಾನ್ ಆರೋಗ್ಯ ಕ್ಷೀಣಿಸಿದೆ. ಸೋಮವಾರ ಬೆಳಗ್ಗೆ ಆರೋಗ್ಯದಲ್ಲಿ ಏರುಪೇರಾದ ನಂತರ ಲಖನೌನ ಆಸ್ಪತ್ರೆಯೊಂದಕ್ಕೆ ಕಳುಹಿಸಲಾಯಿತು ಎಂದು ಕಾರಾಗೃಹದ ಅಧಿಕಾರಿಗಳು ತಿಳಿಸಿದ್ದಾರೆ.
ಸೋಂಕಿಗೆ ತುತ್ತಾಗಿರುವ ಅಜಂ ಖಾನ್ ಅವರಿಗೆ ಬೆಳಗ್ಗೆ ಉಸಿರಾಟದಲ್ಲಿ ತೊಂದರೆ ಉಂಟಾಗಿತ್ತು. ಕೂಡಲೇ, ಜಿಲ್ಲಾಸ್ಪತ್ರೆಯ ವೈದ್ಯರ ತಂಡವೊಂದು ತಪಾಸಣೆ ನಡೆಸಿದೆ ಎಂದು ಸಿತಾಪುರ ಜಿಲ್ಲಾ ಕಾರಾಗೃಹದ ಅಧಿಕಾರಿ ಹೇಳಿದ್ದಾರೆ.
ಪ್ರಾಥಮಿಕ ತಪಾಸಣೆ ನಂತರ ಉತ್ತಮ ಚಿಕಿತ್ಸೆಗಾಗಿ ಲಖನೌ ಆಸ್ಪತ್ರೆಗೆ ಸಲಹೆ ಮಾಡಲಾಯಿತು ಎಂದು ಅವರು ತಿಳಿಸಿದ್ದಾರೆ. ಕೂಡಲೇ ಅವರನ್ನು ಕೋವಿಡ್ ಚಿಕಿತ್ಸೆ ಪಡೆದು ಇತ್ತೀಚಿಗೆ ಬಿಡುಗಡೆಯಾಗಿದ್ದ ಲಖನೌನ ಮೆದಾಂತ ಆಸ್ಪತ್ರೆಗೆ ಶಿಫಾರಸು ಮಾಡಲಾಯಿತು. ಪೊಲೀಸ್ ಎಸ್ಕಾರ್ಟ್ ನೊಂದಿಗೆ ಆಂಬ್ಯುಲೆನ್ಸ್ ವೊಂದರನ್ನು ಅವರನ್ನು ಕಳುಹಿಸಲಾಯಿತು ಎಂದು ಅವರು ಮಾಹಿತಿ ನೀಡಿದ್ದಾರೆ.
ಹಿರಿಯ ಸಮಾಜವಾದಿ ಪಕ್ಷದ ಮುಖಂಡರಾಗಿರುವ ಅಜಂ ಖಾನ್ ವಂಚನೆ ಮತ್ತಿತರ ಅನೇಕ ಅಪರಾಧ ಪ್ರಕರಣಗಳಲ್ಲಿ ಜೈಲು ಸೇರಿದ್ದಾರೆ.