Sunday, 15th December 2024

ಸುಪ್ರೀಂ ನೇಮಿತ ಸಮಿತಿ ಸದಸ್ಯತ್ವ ತ್ಯಜಿಸಿದ ಭೂಪೇಂದರ್ ಸಿಂಗ್ ಮಾನ್

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆ ಸಂಬಂಧ ರೈತರೊಂದಿಗೆ ಮಾತುಕತೆ ನಡೆಸುವುದಕ್ಕೆ ಸುಪ್ರೀಂ ಕೋರ್ಟ್ ನೇಮಿಸಿರುವ ನಾಲ್ವರು ಸದಸ್ಯರ ಸಮಿತಿಯಿಂದ ರೈತ ನಾಯಕ ಭೂಪೇಂದರ್ ಸಿಂಗ್ ಮಾನ್ ಹೊರ ನಡೆದಿದ್ದಾರೆ.

ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮಾಹಿತಿ ನೀಡಿದ್ದು, ಮಾಜಿ ಸಂಸದ, ಬಿಕೆಯು ನ ರಾಷ್ಟ್ರೀಯ ಅಧ್ಯಕ್ಷ, ಅಖಿಲ ಭಾರತೀಯ ಕಿಸಾನ್ ಸಮನ್ವಯ ಸಮಿತಿ ಅಧ್ಯಕ್ಷ ಭೂಪೇಂದ್ರ ಸಿಂಗ್ ಮಾನ್ ಸುಪ್ರೀಂ ಕೋರ್ಟ್ ನೇಮಕ ಮಾಡಿರುವ ಸಮಿತಿ ಯಿಂದ ಹೊರಬಂದಿದ್ದಾರೆ.

ತಾವು ಸಮಿತಿ ಸದಸ್ಯ ಸ್ಥಾನದಿಂದ ಹೊರಬರುತ್ತಿರುವುದರ ಬಗ್ಗೆ ಪತ್ರ ಬರೆದಿರುವ ಮಾನ್, “ತಮ್ಮನ್ನು ನೇಮಕ ಮಾಡಿರುವುದಕ್ಕೆ ಸುಪ್ರೀಂ ಕೋರ್ಟ್ ಗೆ ಧನ್ಯವಾದ ತಿಳಿಸುತ್ತೇನೆ, ನಾನು ರೈತರ ನಾಯಕನಾಗಿದ್ದುಕೊಂಡು ಅವರ ಹಿತಾಸಕ್ತಿಗಾಗಿ ಯಾವುದೇ ಹುದ್ದೆಯನ್ನೂ ತ್ಯಜಿಸುವುದಕ್ಕೂ ಸಿದ್ಧನಿದ್ದೇನೆ. ಸಮಿತಿ ಸದಸ್ಯತ್ವದಿಂದ ಹೊರಬರುತ್ತಿದ್ದೇನೆ ಎಂದು ಬಿಎಸ್ ಮಾನ್ ತಿಳಿಸಿ ದ್ದಾರೆ. ಕೃಷಿ ತಜ್ಞರಾದ ಅಶೋಕ್ ಗುಲಟಿ, ಡಾ.ಪ್ರಮೋದ್ ಕುಮಾರ್ ಜೋಷಿ, ಅನಿಲ್ ಧನ್ವಂತ್ ಅವರು ಸಮಿತಿಯಲ್ಲಿದ್ದಾರೆ”.