Thursday, 12th December 2024

28 ವರ್ಷಗಳ ಬಳಿಕ ಬಾಬ್ರಿ ತೀರ್ಪು ಪ್ರಕಟ: ಬಿಜೆಪಿ ಭೀಷ್ಮನಿಗೆ ರಿಲೀಫ್

28 ವರ್ಷಗಳ ಕಾಲ ನಡೆದ ಪ್ರಕರಣದ ವಿಚಾರಣೆ

ಎಲ್ಲಾ 32 ಆರೋಪಿಗಳು ಖುಲಾಸೆ

ಜೀವಮಾನದ ಅಗ್ನಿಪರೀಕ್ಷೆ ಗೆದ್ದ ಭೀಷ್ಮ

*ತೀರ್ಪು ನೋಡಿ ಅಡ್ವಾಣಿ ಭಾವುಕ

ಲಖನೌ: ಬಾಬ್ರಿ ಮಸೀದಿ ಧ್ವಂಸ ಪೂರ್ವ ನಿಯೋಜಿತ ಅಲ್ಲ. ಮಸೀದಿ ಧ್ವಂಸಕ್ಕೆ ಕ್ರಿಮಿನಲ್ ಸಂಚು ರೂಪಿಸಿಲ್ಲ ಎಂದು ಲಖನೌ ಸಿಬಿಐ ಕೋರ್ಟ್ ಮಹತ್ವದ ಆದೇಶ ನೀಡಿದೆ.

ಈ ಮೂಲಕ ಬಿಜೆಪಿ ಭೀಷ್ಮನಿಗೆ ಬಿಗ್ ರಿಲೀಫ್ ಸಿಕ್ಕಿದೆ. ಲಾಲ್ ಕೃಷ್ಣ ಅಡ್ವಾಣಿ ಸೇರಿದಂತೆ ಉಮಾಭಾರತಿ, ಕಲ್ಯಾಣ್ ಸಿಂಗ್, ಮುರಳಿ ಮನೋಹರ ಜೋಶಿ ಸಹಿತ 32 ಮಂದಿ ಆರೋಪಿಗಳು ಖುಲಾಸೆಯಾಗಿದ್ದಾರೆ.

ಇಂದಿನ ಕೋರ್ಟ್‌ ಲಾಪದಲ್ಲಿ ಆರೋಪಿಗಳು ಹಾಜರಾಗಿಲ್ಲ. ರಾಮ್ ವಿಲಾಸ್ ವೇದಾಂತಿ ಸೇರಿದಂತೆ 18 ಜನ ಹಾಜರಿದ್ದರು.  ವಿಡಿಯೋ ಕಾನ್ಫರೆನ್ಸ್ ಮೂಲಕ ಅಡ್ವಾಣಿ, ಜೋಶಿ ಹಾಜರಾದರು. ನ್ಯಾ.ಎಸ್.ಕೆ.ಯಾದವ್ ಅವರು ಎರಡು ಸಾವಿರ ತೀರ್ಪಿನ ಪುಟವನ್ನು ಓದಿದರು.