ಬದರಿನಾಥ್: ಹೆದ್ದಾರಿಯಲ್ಲಿ ಭಾರೀ ಬಿರುಕು ಕಾಣಿಸಿಕೊಂಡಿದ್ದು, ಚಾರ್ ಧಾಮ್ ಯಾತ್ರೆಗೆ ಭೂಕುಸಿತದ ಆತಂಕ ಕಾಡುತ್ತಿದೆ.
ಉತ್ತರಖಂಡ ಸರ್ಕಾರ ಇತ್ತೀಚೆಗಷ್ಟೇ ಚಾರ್‌ಧಾಮ್ ಯಾತ್ರೆಯ ದಿನಾಂಕ ಘೋಷಿಸಿದೆ. ಈ ಬೆನ್ನಲ್ಲೇ ಬಿರುಕು ಕಾಣಿಸಿರುವುದು ಆತಂಕಕ್ಕೀಡು ಮಾಡಿದೆ. ಬದರೀನಾಥದ ಹೆದ್ದಾರಿಯಲ್ಲಿ 10 ಕಡೆ ಬಿರುಕು ಕಾಣಿಸಿದೆ, ಜೋಶಿಮಠ ಮತ್ತು ಮರ್‌ವಾರಿ ಗ್ರಾಮ ಮಾರ್ಗದ ಮಧ್ಯೆ ಬಿರುಕು ಕಾಣಿಸಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಬದರೀನಾಥ ತಲುಪಲು ಈ ರಸ್ತೆ ಪ್ರಮುಖವಾದ್ದಾಗಿದ್ದು, 10 ಕಡೆ ಹೊಸತಾಗಿ ಬಿರುಕು ಕಾಣಿಸಿರುವುದು ಎಲ್ಲರಿಗೂ ಭಯ ಹುಟ್ಟಿಸಿದೆ. ಈ ಮೊದಲು ಕಾಣಿಸಿದ್ದ ಬಿರುಕಗಳು ದೊಡ್ಡದಾಗುತ್ತಾ ಇವೆ ಎಂದು ಜೋಶಿಮಠ ಉಳಿಸಿ ಸಂಘರ್ಷ ಸಮಿತಿ ಕಾರ್ಯಕರ್ತ ಸಂಜಯ್ ಉನಿಯಾಲ್ ಹೇಳಿದ್ದಾರೆ.
ಈ ಹಿಂದೆಯೂ ಬಿರುಕುಗಳು ಕಾಣಿಸಿದ್ದು, ಅದನ್ನು ಮುಚ್ಚಲಾಗಿತ್ತು. ಆದರೆ ಇದೀಗ ಅವೆಲ್ಲಾ ಮತ್ತೆ ಬಾಯ್ತೆರೆ ದಿದ್ದು, ದೊಡ್ಡದಾಗುತ್ತಲೇ ಇದೆ ಎಂದು ಸ್ಥಳೀಯರು ಹೇಳಿದ್ದಾರೆ.