Sunday, 15th December 2024

ಆಶಿಶ್ ಮಿಶ್ರಾಗೆ ಜಾಮೀನು ನಿರಾಕರಣೆ

ಲಕ್ನೋ: ಅ.3 ರಂದು ನಡೆದ ಲಖಿಂಪುರ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅಜಯ್ ಮಿಶ್ರಾ ಟೆನಿ ಅವರ ಪುತ್ರ ಆಶಿಶ್ ಮಿಶ್ರಾ ಅವರಿಗೆ  ಸೆಷನ್ಸ್ ಕೋರ್ಟ್ ಬುಧವಾರ ಜಾಮೀನು ನಿರಾಕರಿಸಿದೆ.

ಆಶಿಶ್ ಮಿಶ್ರಾ ಮತ್ತು ಆತನ ಸಹಚರ ಆಶಿಶ್ ಪಾಂಡೆ ತಮ್ಮ ಜಾಮೀನು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಆದರೆ ಮುಖ್ಯ ನ್ಯಾಯಾಧೀಶ ಚಿಂತಾ ರಾಮ್ ತಿರಸ್ಕರಿಸಿ ದ್ದಾರೆ.

12 ಗಂಟೆಗಳಿಗೂ ಹೆಚ್ಚಿನ ತೀವ್ರ ವಿಚಾರಣೆಯ ನಂತರ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು ಆಶಿಶ್ ನನ್ನು ಅ.9 ರಂದು ಬಂಧಿಸಿತು ಮತ್ತು ಮಂಗಳವಾರದಿಂದ 3 ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.