ನವದೆಹಲಿ: ಪ್ರಚೋದನಕಾರಿ ಭಾಷಣ ಮತ್ತು ಹಿಂಸಾಚಾರಕ್ಕೆ ಪ್ರಚೋದನೆ(2019 ರಲ್ಲಿ) ನೀಡಿದ ಆರೋಪದ ಮೇಲೆ ಜೆಎನ್‌ಯು ವಿದ್ಯಾರ್ಥಿ ಶರ್ಜೀಲ್ ಇಮಾಮ್‌ಗೆ ದಿಲ್ಲಿ ನ್ಯಾಯಾಲಯ ಶುಕ್ರವಾರ ಜಾಮೀನು ನಿರಾಕರಿಸಿದೆ.
ಭಾಷಣವು ಕೋಮುವಾದ ಮತ್ತು ಅದರ ವಿಷಯವು “ಶಾಂತಿ ಮತ್ತು ಸಾಮರಸ್ಯದ ಮೇಲೆ ದುರ್ಬಲ ಗೊಳಿಸುವ ಪರಿಣಾಮ ಬೀರುತ್ತದೆ” ಎಂದು ನ್ಯಾಯಾಲಯ ತಿಳಿಸಿದೆ.
ಇಮಾಮ್ ಡಿಸೆಂಬರ್ 13, 2019 ರಂದು ಪ್ರಚೋದನಕಾರಿ ಭಾಷಣ ಮಾಡಿದ್ದು, ಎರಡು ದಿನಗಳ ನಂತರ ಗಲಭೆಗೆ ಕಾರಣವಾಯಿತು. 3,000 ಕ್ಕೂ ಹೆಚ್ಚು ಜನರನ್ನು ಒಳಗೊಂಡ ಗುಂಪು ಪೊಲೀಸ್ ಸಿಬ್ಬಂದಿ ಮೇಲೆ ದಾಳಿ ಮಾಡಿ ಹಲವಾರು ವಾಹನಗಳನ್ನು ಸುಟ್ಟುಹಾಕಿತು ಎಂದು ಆರೋಪ ಮಾಡಿದ್ದಾರೆ.
ಇಮಾಂಗೆ ಜಾಮೀನು ನಿರಾಕರಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅನೂಜ್ ಅಗರ್ವಾಲ್, ಭಾಷಣವನ್ನು ಸರಳವಾಗಿ ಓದುವಾಗಲೇ ಅದು ಕೋಮು ವಾದದಿಂದ ಕೂಡಿರುವುದಾಗಿ ಸ್ಪಷ್ಟವಾಗುತ್ತದೆ ಎಂದು ಹೇಳಿದರು.
ಗಲಭೆಕೋರರು ಇಮಾಮ್ ಭಾಷಣದಿಂದ ಪ್ರಚೋದಿತರಾದರು ಮತ್ತು ನಂತರ ಗಲಭೆ, ಕಿಡಿಗೇಡಿತನದಿಂದ ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ ಎಂಬ ಆರೋಪಗಳಿಗೆ ಪುರಾವೆಯಾಗಿರುವ ಸಾಕ್ಷಿಗಳು ಸಮರ್ಪಕವಾಗಿಲ್ಲ ಹಾಗೂ ಹುರುಳಿಲ್ಲದವುಗಳಾಗಿವೆ.