Friday, 22nd November 2024

ಲಾಲು ಜಾಮೀನು ಅರ್ಜಿಯ ವಿಚಾರಣೆ ಮುಂದಕ್ಕೆ

ರಾಂಚಿ: ಮೇವು ಹಗರಣದ ಆರೋಪದಲ್ಲಿ ಜೈಲು ವಾಸ ಅನುಭವಿಸುತ್ತಿರುವ ಬಿಹಾರದ ಮಾಜಿ ಮುಖ್ಯ ಮಂತ್ರಿ, ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ಜಾಮೀನು ಅರ್ಜಿಯ ವಿಚಾರಣೆಯನ್ನು ನವೆಂಬರ್ 27 ರವರೆಗೆ ಮುಂದೂಡಲಾಗಿದೆ.

ನ್ಯಾಯಮೂರ್ತಿ ಅಪ್ರೇಶ್ ಸಿಂಗ್‌ ಅವರ ಏಕ ಸದಸ್ಯ ನ್ಯಾಯಪೀಠ ವಿಚಾರಣೆ ಮುಂದೂಡಿದೆ ಮತ್ತು ಸಿಬಿಐ ಪರ ವಕೀಲರು ತಮ್ಮ ಉತ್ತರವನ್ನು ಸಲ್ಲಿಸಲು ನ್ಯಾಯಾಲಯದಿಂದ ಹೆಚ್ಚಿನ ಸಮಯವನ್ನು ಕೋರಿದ ನಂತರ ನವೆಂಬರ್ 27ಕ್ಕೆ ಮುಂದಿನ ದಿನಾಂಕವೆಂದು ನಿಗದಿಪಡಿಸಿದೆ.

ನ್ಯಾಯಾಲಯದ ತೀರ್ಪು ಯಾದವ್ ಮತ್ತು ಅವರ ಬೆಂಬಲಿಗರಿಗೆ ದೊಡ್ಡ ಹಿನ್ನಡೆಯೆಂದು ಪರಿಗಣಿಸ ಲ್ಪಟ್ಟಿದೆ. ಪ್ರಸ್ತುತ, ಅವರು ರಿಮ್ಸ್ ನಿರ್ದೇಶಕರ ಬಂಗಲೆಯಲ್ಲಿ ವಾಸ್ತವ್ಯ ಹೂಡಿದ್ದು ಅನಾರೋಗ್ಯದ ಸಂಬಂಧ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೇವು ಹಗರಣಕ್ಕೆ ಸಂಬಂಧಿಸಿದ ಮೂರು ಪ್ರಕರಣಗಳಲ್ಲಿ ಆರ್‌ಜೆಡಿ ಮುಖಂಡ ಶಿಕ್ಷೆಗೆ ಒಳಗಾಗಿದ್ದಾರೆ.