ಪಾವತಿ ವ್ಯವಸ್ಥೆಯ ದತ್ತಾಂಶ ಸಂಗ್ರಹಿಸುವಲ್ಲಿ ಅನುಸರಣೆ ಮಾಡದ ಕಾರಣ ಮೇ 2021ರಿಂದ ಜಾರಿಗೆ ಬರುವಂತೆ ಈ ನಿಷೇಧವನ್ನು ವಿಧಿಸಲಾಗಿದೆ.
‘ಪಾವತಿ ವ್ಯವಸ್ಥೆಯ ದತ್ತಾಂಶದ ಸಂಗ್ರಹಣೆಗೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ ಏಪ್ರಿಲ್ 6, 2018 ರ ಸುತ್ತೋಲೆಯೊಂದಿಗೆ ಅಮೆರಿಕನ್ ಎಕ್ಸ್ಪ್ರೆಸ್ ಬ್ಯಾಂಕಿಂಗ್ ಕಾರ್ಪೊರೇಷನ್ ಪ್ರದರ್ಶಿಸಿದ ತೃಪ್ತಿಕರ ಅನುಸರಣೆ ಯನ್ನು ಗಮನದಲ್ಲಿಟ್ಟುಕೊಂಡು, ಹೊಸ ದೇಶೀಯ ಗ್ರಾಹಕರನ್ನು ಆನ್-ಬೋರ್ಡಿಂಗ್ ಮೇಲೆ 2021 ರ ಏಪ್ರಿಲ್ 23 ರ ಆದೇಶದ ಮೇರೆಗೆ ವಿಧಿಸ ಲಾದ ನಿರ್ಬಂಧಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ತೆಗೆದು ಹಾಕಲಾಗಿದೆ.