Saturday, 16th November 2024

Bangladesh Government : ಭಾರತದ ರಾಯಭಾರಿಯನ್ನು ವಾಪಸ್ ಕರೆಸಿಕೊಂಡ ಬಾಂಗ್ಲಾದೇಶ

Bangladesh government

ನವದೆಹಲಿ: ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು (Bangladesh Government) ರಾಜತಾಂತ್ರಿಕ ಪುನರ್‌ರಚನೆ ಮಾಡುತ್ತಿದ್ದು ಭಾರತದ ರಾಯಭಾರಿ ಸೇರಿದಂತೆ ಐದು ರಾಯಭಾರಿಗಳನ್ನು ವಾಪಸ್ ಕರೆಸಿಕೊಂಡಿದೆ. ಅಲ್ಲಿನ ವಿದೇಶಾಂಗ ಸಚಿವಾಲಯದ ಅಧಿಕಾರಿಯೊಬ್ಬರು ಗುರುವಾರ ಈ ಮಾಹಿತಿ ನೀಡಿದ್ದಾರೆ. ಹಲವು ವಾರಗಳ ಹಿಂಸಾತ್ಮಕ ಪ್ರತಿಭಟನೆಗಳ ನಂತರ ದಕ್ಷಿಣ ಏಷ್ಯಾ ರಾಷ್ಟ್ರದಲ್ಲಿ ಪ್ರಮುಖ ರಾಜಕೀಯ ಬದಲಾವಣೆಗಳು ನಡೆದಿದ್ದವು. ಬಳಿಕ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರ ಆರಂಭಗೊಂಡಿತ್ತು. ಆಗಸ್ಟ್ 5ರಂದು ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನ ಮಾಡಬೇಕಾಯಿತು.

ಬೆಲ್ಜಿಯಂ ರಾಜಧಾನಿ ಬ್ರಸೆಲ್ಸ್, ಆಸ್ಟ್ರೇಲಿಯಾ ಕ್ಯಾನ್ಬೆರಾ, ಪೋರ್ಚುಗಲ್‌ ರಾಜಧಾನಿ ಲಿಸ್ಬನ್ ನವದೆಹಲಿಯ ರಾಯಭಾರಿಗಳು ಮತ್ತು ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆಯ ಕಾಯಂ ನಿಯೋಗವನ್ನು ತಕ್ಷಣವೇ ಢಾಕಾಗೆ ಮರಳುವಂತೆ ವಿದೇಶಾಂಗ ಸಚಿವಾಲಯ ಆದೇಶಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ತಕ್ಷಣವೇ ತಮ್ಮ ಜವಾಬ್ದಾರಿಗಳನ್ನು ಹಸ್ತಾಂತರಿಸಿ ಹಿಂತಿರುಗುವಂತೆ ಅವರಿಗೆ ತಿಳಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ. ಬ್ರಿಟನ್‌ನ ಹೈಕಮಿಷನರ್ ಅಥವಾ ರಾಯಭಾರಿ ಸೈದಾ ಮುನಾ ತಸ್ನೀಮ್ ಅವರನ್ನು ವಾಪಸ್ ಕರೆಸಿಕೊಂಡ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ.

ಇದನ್ನೂ ಓದಿ: Viral News: 7 ದಿನಗಳಲ್ಲಿ ದೇಶ ಬಿಟ್ಟು ತೊಲಗಿ; ಬಾಂಗ್ಲಾದೇಶದ ಹಿಂದೂಗಳಿಗೆ ಬೆದರಿಕೆ

ಹಸೀನಾ ಅವರನ್ನು ಪದಚ್ಯುತಗೊಳಿಸಿವುದಕ್ಕಾಗಿ ನಡೆದ ವಿದ್ಯಾರ್ಥಿ ನೇತೃತ್ವದ ಚಳವಳಿಯ ಪರಿಣಾಮವಾಗಿ 700 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಇದು ಭಾರತದೊಂದಿಗಿನ ಸಂಬಂಧವನ್ನು ಹದಗೆಡಿಸಿತ್ತು. ಎರಡೂ ದೇಶಗಳು ಬಂಗಾಳ ಕೊಲ್ಲಿಯಲ್ಲಿ 4,000 ಕಿ.ಮೀ (2500 ಮೈಲಿ) ಗಡಿ ಮತ್ತು ಕಡಲ ಗಡಿಗಳನ್ನು ಹೊಂದಿವೆ.

ರಾಜಕೀಯ ಬದಲಾವಣೆಗಳ ನಂತರ ಬಾಂಗ್ಲಾದೇಶದ ಅಲ್ಪಸಂಖ್ಯಾತ ಗುಂಪುಗಳು ಹಿಂದೂಗಳ ಮೇಲೆ ದಾಳಿ ಮಾಡುತ್ತಿವೆ. ಆದರೆ ಹಿಂಸಾಚಾರವು ರಾಜಕೀಯದಿಂದ ಪ್ರೇರಿತವಾಗಿದೆ, ಧರ್ಮದಿಂದಲ್ಲ ಎಂದು ಅಲ್ಲಿನ ಸರ್ಕಾರ ಹೇಳುತ್ತಿದೆ.