Sunday, 15th December 2024

Bangladesh Unrest : ಹಿಂದೂಗಳ ಆಸ್ತಿ ಧ್ವಂಸ ಪ್ರಕರಣ ; ಬಾಂಗ್ಲಾದಲ್ಲಿ ನಾಲ್ವರು ಅರೆಸ್ಟ್‌

Bangladesh Unrest

ಢಾಕಾ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಹಿಂಸಾಚಾರ ಸದ್ಯಕ್ಕೆ ನಿಲ್ಲುವಂತೆ ಕಾಣಿಸುತ್ತಿಲ್ಲ. ಡಿಸೆಂಬರ್‌ ತಿಂಗಳ ಆರಂಭದಲ್ಲಿ ಸುನಮ್‌ಗಂಜ್ ಜಿಲ್ಲೆಯ ದೋರಾಬಜಾರ್ ಪ್ರದೇಶದಲ್ಲಿ ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿದ ಮತ್ತು ಮನೆಗಳು-ಅಂಗಡಿಗಳಿಗೆ (Vandalising a Hindu temple) ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶದ ಪೊಲೀಸರು ನಾಲ್ವರನ್ನು ಶನಿವಾರ ಬಂಧಿಸಿದ್ದಾರೆ. (Bangladesh Unrest)

ಬಂಧಿತ ವ್ಯಕ್ತಿಗಳನ್ನು ಅಲಿಮ್ ಹೊಸೈನ್, 19, ಸುಲ್ತಾನ್ ಅಹಮದ್ ರಾಜು, 20, ಇಮ್ರಾನ್ ಹೊಸೈನ್, 31, ಮತ್ತು ಶಾಜಹಾನ್ ಹೊಸೇನ್, 20 ಎಂದು ಗುರುತಿಸಲಾಗಿದೆ. ಇಷ್ಟೇ ಅಲ್ಲದೆ 12 ಹೆಸರಿಸಲಾದ ವ್ಯಕ್ತಿಗಳು ಮತ್ತು 150-170 ಅಪರಿಚಿತ ವ್ಯಕ್ತಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಏನಿದು ಘಟನೆ ?

ಡಿಸೆಂಬರ್ 3 ರಂದು ಸುನಮ್‌ಗಂಜ್ ಜಿಲ್ಲೆಯ ನಿವಾಸಿ ಆಕಾಶ್ ದಾಸ್ ಎಂಬಾತ ಫೇಸ್‌ಬುಕ್ ನಲ್ಲಿ ಮಾಡಿದ್ದ ಪೋಸ್ಟ್ ಜಿಲ್ಲೆಯಲ್ಲಿ ಉದ್ವಿಗ್ನತೆ ಉಂಟುಮಾಡಿತ್ತು. ಆತ ಪೋಸ್ಟನ್ನು ಡಿಲೀಟ್ ಮಾಡಿದ್ದರೂ ಸ್ಕ್ರೀನ್‌ಶಾಟ್‌ಗಳು ವ್ಯಾಪಕವಾಗಿ ಹರಡಿ, ಹಿಂಸಾಚಾರಕ್ಕೆ ಕಾರಣವಾಯಿತು ಎಂದು ಬಾಂಗ್ಲಾದೇಶದ ಮಾಧ್ಯಮಗಳು ವರದಿ ಮಾಡಿದ್ದವು. ಪೋಸ್ಟ್‌ ಮಾಡಿ ಕೆಲವೇ ನಿಮಿಷದಲ್ಲಿ ಆಕಾಶ್‌ ತನ್ನ ಪೋಸ್ಟ್‌ ಡಿಲಿಟ್‌ ಮಾಡಿದ್ದ. ಆದರೆ ಅದರ ಸ್ಕ್ರೀನ್‌ಶಾಟ್‌ಗಳನ್ನು ಸ್ಥಳೀಯರಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ, ಇದು ಪ್ರದೇಶದಲ್ಲಿ ಉದ್ವಿಗ್ನತೆಗೆ ಕಾರಣವಾಗಿತ್ತು.

ಸ್ಥಳೀಯ ಪೊಲೀಸರು ಆಕಾಶ್‌ನನ್ನು ತಕ್ಷಣವೇ ಬಂಧಿಸಿದ್ದಾರೆ. ಆದರೆ ಆತನ ಸುರಕ್ಷತೆಯ ಕಳವಳದ ನಡುವೆ ಆತನನ್ನು ಮತ್ತೊಂದು ಠಾಣೆಗೆ ವರ್ಗಾಯಿಸಲಾಗಿದೆ. ಅದೇ ದಿನ ಗುಂಪೊಂದು ಹಿಂದೂ ಸಮುದಾಯದ ಮನೆಗಳು, ಅಂಗಡಿಗಳು ಮತ್ತು ಸ್ಥಳೀಯ ಲೋಕನಾಥ ದೇವಸ್ಥಾನವನ್ನು ಧ್ವಂಸಗೊಳಿಸಿ, ಹಾನಿಯನ್ನುಂಟು ಮಾಡಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾಧಿಕಾರಿ (ಡಿಸಿ) ಮತ್ತು ಸೇನಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.

ಹಿಂದೂಗಳ ಮೇಲೆ ಹಲ್ಲೆ

ಬಾಂಗ್ಲಾದೇಶದಲ್ಲಿ ಹಿಂದೂಗಳು ಸೇರಿದಂತೆ ಇನ್ನಿತರ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದಾಳಿಗಳ ನಡುವೆ, ಕೋಲ್ಕತ್ತಾ ಮೂಲದ ಯುವಕನೋರ್ವ ಢಾಕಾದಲ್ಲಿ ತಾನು ಎದುರಿಸಿದ ಸಂಕಷ್ಟವನ್ನು ಹಂಚಿಕೊಂಡಿದ್ದಾರೆ. ತಾನು ಭಾರತದ ಹಿಂದೂ ಎಂದು ತಿಳಿದ ನಂತರ ಕೆಲವು ಅನಾಮಧೇಯ ವ್ಯಕ್ತಿಗಳು ತನ್ನ ಮೇಲೆ ಹಲ್ಲೆ ನಡೆಸಿದರು ಎಂದು ಯುವಕ ಆರೋಪಿಸಿದ್ದಾನೆ.

ನನ್ನ ಸ್ನೇಹಿತನ ನಿವಾಸದಿಂದ 70 ಮೀಟರ್ ದೂರದಲ್ಲಿ ನಾಲ್ಕೈದು ಯುವಕರ ಗುಂಪು ನನ್ನನ್ನು ಅಡ್ಡಗಟ್ಟಿದರು. ಅವರು ನನ್ನ ಗುರುತನ್ನು ಕೇಳಿದರು. ನಾನು ಅವರಿಗೆ ಭಾರತದಿಂದ ಬಂದವನು ಮತ್ತು ಹಿಂದೂ ಎಂದು ಹೇಳಿದಾಕ್ಷಣ ಹಲ್ಲೆ ನಡೆಸಲು ಪ್ರಾರಂಭಿಸಿದರು. ನನ್ನನ್ನು ಉಳಿಸಲು ಪ್ರಯತ್ನಿಸಿದ ನನ್ನ ಸ್ನೇಹಿತನ ಮೇಲೂ ದಾಳಿ ಮಾಡಿದರು ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ : Bangladesh Unrest: ಕೋರ್ಟ್‌ ವಿಚಾರಣೆಗೆ ಮುನ್ನವೇ ಚಿನ್ಮಯ್‌ ದಾಸ್‌ ಪರ ವಕೀಲನ ಮೇಲೆ ಡೆಡ್ಲಿ ಅಟ್ಯಾಕ್‌!