Thursday, 12th December 2024

ದೆಹಲಿಗೆ ಬಾಂಗ್ಲಾದೇಶ ಪ್ರಧಾನಿ ಆಗಮನ

ವದೆಹಲಿ: ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಮುಂಚಿತವಾಗಿ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಶನಿವಾರ ನವದೆಹಲಿಗೆ ಆಗಮಿಸಿದರು.

ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಬಹುಮತ ಗಳಿಸಿದ ನಂತರ ಅವರು ದಾಖಲೆಯ ಮೂರನೇ ಬಾರಿಗೆ ಭಾರತದ ಪ್ರಧಾನಿಯಾಗಲಿದ್ದಾರೆ. ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಭಾನುವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹೊರತಾಗಿ ಉಭಯ ನಾಯಕರು ಮಹತ್ವದ ಸಭೆ ನಡೆಸುವ ನಿರೀಕ್ಷೆಯಿದೆ ಎಂದು ಬಾಂಗ್ಲಾದೇಶ ಹೈಕಮಿಷನ್ ಪತ್ರಿಕಾ ಸಚಿವ ಶಬಾನ್ ಮಹಮೂದ್ ತಿಳಿಸಿದ್ದಾರೆ.