Thursday, 12th December 2024

ಆನ್‌ಲೈನ್‌ ರಮ್ಮಿಯಲ್ಲಿ ಹಣ ಕಳೆದುಕೊಂಡು ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ

ಕೊಯಮತ್ತೂರು:  ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ, ಹದಿಹರೆಯದವರನ್ನು ತನ್ನತ್ತ ಸೆಳೆಯುತ್ತಿರುವ ಆನ್‌ಲೈನ್‌ ರಮ್ಮಿಯಲ್ಲಿ ಹಣ ಕಳೆದುಕೊಂಡು ಬ್ಯಾಂಕ್‌ ಉದ್ಯೋಗಿ(28) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದರು.

ಮದನ್ ‌ಕುಮಾರ್‌ ಮೃತ ವ್ಯಕ್ತಿ. ತಮ್ಮ ಮನೆಯಲ್ಲಿಯೇ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕುಟುಂಬದ ಸದಸ್ಯರ ಗಮನಕ್ಕೆ ಬಂದಿದೆ. ಆನ್‌ಲೈನ್‌ ರಮ್ಮಿಯಲ್ಲಿ ಆರಂಭಿಕ ಹಂತದಲ್ಲಿ ಹಣ ಹೂಡಿ, ಹೆಚ್ಚಿನ ಗಳಿಕೆಯಾಗಿತ್ತು. ಬಳಿಕ, ಇದರ ಚಟಕ್ಕೆ ಬಿದ್ದಿದ್ದರು.

ಬಳಿಕ ಹಣ ಕಳೆದುಕೊಂಡಾಗ ಮದ್ಯಪಾನದ ವ್ಯಸನಕ್ಕೆ ಒಳಗಾಗಿದ್ದರು. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.