Thursday, 12th December 2024

ವಾರಣಾಸಿ ವೈಭವ ಮೆಚ್ಚಿ ಮೋದಿಯನ್ನು ಹೊಗಳಿದ ಡ್ವಿಟ್‌ ಹೊವಾರ್ಡ್‌

ವಾರಣಾಸಿ: ‘ಆಧ್ಯಾತ್ಮಿಕ ಪ್ರಯಾಣ’ ಕೈಗೊಂಡಿರುವ ಬಾಸ್ಕೆಟ್‌ಬಾಲ್‌ ಆಟಗಾರ ಡ್ವಿಟ್‌ ಹೊವಾರ್ಡ್‌ ಅವರು ವಾರಣಾಸಿಗೆ ಭೇಟಿ ನೀಡಿದ್ದು, ನಗರದ ಸೌಂದರ್ಯವನ್ನು ನೋಡಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿ ದ್ದಾರೆ.

ವಾರಣಾಸಿಗೆ ಭೇಟಿ ನೀಡಿದ ನಂತರ ನನ್ನಲ್ಲಿ ಶಾಂತಿ ನೆಲೆಸಿದೆ. ವಾರಣಾಸಿ ಸಾಕಷ್ಟು ಜನರನ್ನು ಪ್ರೇರೇಪಿಸುತ್ತದೆ. ನಾನೂ ಕೃತಜ್ಞ ನಾಗಿದ್ದೇನೆ. ಪುನರು ಜ್ಜೀವನಗೊಂಡಿರುವ ಈ ನಗರವು ಇನ್ನಷ್ಟು ಜನರಿಗೆ ಸ್ಫೂರ್ತಿ ನೀಡಲಿದೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆಯೂ ಬಾಸ್ಕೆಟ್‌ಬಾಲ್‌ ಆಟಗಾರ ನಗರಕ್ಕೆ ಭೇಟಿ ನೀಡಿರುವುದನ್ನು ಖಚಿತಪಡಿಸಿದೆ.

ಬಾಸ್ಕೆಟ್‌ಬಾಲ್‌ ಆಟಗಾರ ಮತ್ತು ಎನ್‌ಬಿಎ ಚಾಂಪಿಯನ್‌ ಡ್ವಿಟ್‌ ಹೊವಾರ್ಡ್‌ ವಾರಣಾಸಿಗೆ ಭೇಟಿ ನೀಡಿದ್ದರು. ಆಧ್ಯಾತ್ಮಿಕ ಮತ್ತು ಪ್ರಾಚೀನ ಸಾಂಸ್ಕೃತಿಕ ನಗರಕ್ಕೆ ಭೇಟಿ ನೀಡಿದ್ದ ವೇಳೆ ಗಂಗಾ ಆರತಿಯಲ್ಲಿ ಪಾಲ್ಗೊಂಡು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ’ ಎಂದು ಇಲಾಖೆ ಟ್ವೀಟ್‌ ಮಾಡಿದೆ.

36 ವರ್ಷದ ಹೊವಾರ್ಡ್‌ ಅವರು, ಉತ್ತರ ಅಮೇರಿಕದ ವೃತ್ತಿಪರ ಬಾಸ್ಕೆಟ್‌ಬಾಲ್ ಲೀಗ್‌ ಆಗಿರುವ ಎನ್‌ಬಿಎಯಲ್ಲಿ ‘ಲಾಸ್‌ ಎಂಜೆಲ್ಸ್‌ ಲೇಕರ್ಸ್‌’ ತಂಡದ ಪರ ಆಡುತ್ತಿದ್ದಾರೆ.