Sunday, 15th December 2024

ಭತಿಂಡಾ ಮಿಲಿಟರಿ ನೆಲೆಯ ಒಳಗೆ ಗುಂಡಿನ ದಾಳಿ: ನಾಲ್ವರ ಸಾವು

ಬತಿಂಡಾ: ಪಂಜಾಬ್‌ನ ಭತಿಂಡಾ ಮಿಲಿಟರಿ ನೆಲೆಯ ಒಳಗೆ ಬುಧವಾರ ಸಂಭವಿಸಿದ ಗುಂಡಿನ ದಾಳಿದಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಎಂದು ಭಾರತೀಯ ಸೇನೆಯ ನೈಋತ್ಯ ಕಮಾಂಡ್‌ ತಿಳಿಸಿದೆ.

ಬೆಳಗ್ಗೆ ಮಿಲಿಟರಿ ನೆಲೆಯ ಒಳಗೆ ಗುಂಡಿನ ದಾಳಿ ನಡೆದಿದೆ. ಪ್ರದೇಶದ ಒಳಗೆ ಯಾರೋ ಅಪರಿಚಿತರು ಪ್ರವೇಶ ಮಾಡಿದ್ದನ್ನು ಅರಿತ ಕೂಡಲೇ ತುರ್ತು ಪ್ರತಿರೋಧ ತಂಡಗಳು ಕಾರ್ಯಾಚರಣೆಗೆ ಇಳಿದವು. ಶೋಧ ಕಾರ್ಯಾಚರಣೆ ಈಗಲೂ ಮುಂದು ವರಿಯುತ್ತಿವೆ ಎಂದು ಸೇನೆ ತಿಳಿಸಿದೆ.

ಒಳನುಸುಳಿದ ಉಗ್ರರಿಗಾಗಿ ಶೋಧಸಂರಕ್ಷಿತ ಕ್ಯಾಂಪಸ್‌ನ ಒಳಗೆ ಯಾರೋ ಬಂದಿದ್ದನ್ನು ಅರಿತು ಸೇನಾ ಯೋಧರೊಬ್ಬರು ಗುಂಡಿನ ದಾಳಿ ನಡೆಸಿದ್ದರೆ ಎಂದು ಬತಿಂಡಾದ ಎಸ್‌ಎಸ್‌ಪಿ ಗುಲ್‌ನೀತ್‌ ಖುರಾನಾ ತೀಳಿಸಿದ್ದಾರೆ.