ಮುಂಬೈ : ಬಾಲಿವುಡ್ ಹಿರೋಯಿನ್‍ಗಳನ್ನು ನೋಡಿದರೆ ಅವರಷ್ಟೇ ನಾವು ಸುಂದರವಾಗಿ ಕಾಣಬೇಕು ಎಂಬ ಆಸೆ ಸಾಮಾನ್ಯ ಜನರಿಗಾಗುತ್ತದೆ. ಮೇಕಪ್ ಇಲ್ಲದಿದ್ದರೂ ಕೂಡ ಕೆಲವರು ತುಂಬಾ ಸುಂದರವಾಗಿ(Beauty Tips) ಕಾಣುತ್ತಾರೆ. ಹಾಗಾಗಿ ಅವರ ಸೌಂದರ್ಯದ ರಹಸ್ಯವೇನು ಎಂಬ ಕುತೂಹಲ ಹಲವರಿಗಿದೆ. ಆದರೆ ಬಾಲಿವುಡ್ ಕೆಲವು ಸೆಲೆಬ್ರಿಟಿಗಳು ಪ್ರತಿದಿನ ಬೆಳಿಗ್ಗೆ ಚರ್ಮದ ಆರೈಕೆ ಮಾಡುವಾಗ ಈ ಟ್ರಿಕ್ ಅನ್ನು ಅನುಸರಿಸುತ್ತಾರೆ. ಅದು ಏನು ಎಂಬುದನ್ನು ತಿಳಿದುಕೊಳ್ಳೋಣ.
ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಪ್ರತಿದಿನ ಬೆಳಿಗ್ಗೆ ತಮ್ಮ ಚರ್ಮದ ಆರೈಕೆಯ ವೇಳೆ ಐಸ್-ವಾಟರ್ ಫೇಸ್ ಡಿಪ್ ಮಾಡುತ್ತಾರೆ ಎಂದು ಹೇಳಿಕೊಂಡಿದ್ದಾರೆ. ಇದು ಹಳೆಯದಾದ ವಿಧಾನವಾಗಿದ್ದರೂ ಕೂಡ ಇದು ಹೆಚ್ಚು ಪರಿಣಾಮ ಎಂಬುದಾಗಿ ಸೆಲೆಬ್ರಿಟಿಗಳು ಹೇಳಿಕೊಂಡಿದ್ದಾರೆ. ಐಸ್ ವಾಟರ್ ಫೇಶಿಯಲ್ ಚರ್ಮಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಇದರಿಂದ ಚರ್ಮ ಕೆಂಪಾಗುವುದು, ಊತ ಮತ್ತು ಉಬ್ಬುವಿಕೆ, ಕಿರಿಕಿರಿ ಮತ್ತು ಉರಿಯೂತ ಕಡಿಮೆಯಾಗುತ್ತದೆ ಅದೂ ಅಲ್ಲದೇ ಇದು ರಂಧ್ರಗಳನ್ನು ಬಿಗಿಗೊಳಿಸುತ್ತದೆಯಂತೆ. ಈ ಟ್ರಿಕ್ ಅನ್ನು ಅನುಸರಿಸುವ ಬಾಲಿವುಡ್ ಸೆಲೆಬ್ರಿಟಿಗಳು ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾ ಪೇಜ್‍ನಲ್ಲಿ ಹಂಚಿಕೊಂಡಿದ್ದಾರೆ.
ಕೃತಿ ಖರಬಂದಾ : ಇವರು ಪ್ರತಿದಿನ ಈ ಟಿಪ್ಸ್ ಅನುಸರಿಸುತ್ತಾರಂತೆ. ಇದರಿಂದ ಅವರ ಮುಖದಲ್ಲಿನ ಗ್ಲೋ ಹೆಚ್ಚಾಗಿದೆಯಂತೆ.
ಕೃತಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಮುಖವನ್ನು ಐಸ್ ನೀರಿನ ಬಟ್ಟಲಿನಲ್ಲಿ ಮುಳುಗಿಸುತ್ತಿರುವ ವಿಡಿಯೊವನ್ನು ಪೋಸ್ಟ್ ಮಾಡಿ, “ಐಸ್ ಐಸ್ ಬೇಬಿ, #bestskincareever” ಎಂದು ಬರೆದಿದ್ದಾರೆ.
ಆಲಿಯಾ ಭಟ್ : ನಟಿ ಆಲಿಯಾ ಭಟ್ ಅವರು ತಮ್ಮ ಚರ್ಮದ ಆರೈಕೆಯಲ್ಲಿ ಮತ್ತು ಪ್ರತಿದಿನ ಬೆಳಗ್ಗೆ ಐಸ್ ವಾಟರ್ ಫೇಶಿಯಲ್ ಮಾಡಿಕೊಳ್ಳುತ್ತಾರಂತೆ.
ಮುಖವನ್ನು ಐಸ್ ನೀರಿನ ಬಟ್ಟಲಿನಲ್ಲಿ ಮುಳಗಿಸುವುದರಿಂದ ಸಾಕಷ್ಟು ಪ್ರಯೋಜನವಿದೆ ಎಂದು ಅಲಿಯಾ ಭಟ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.ಇದು ಮುಖವನ್ನು ಬಿಗಿಗೊಳಿಸುತ್ತದೆ. ನೆರಿಗೆಗಳನ್ನು ಕಡಿಮೆ ಮಾಡುತ್ತದೆ ಎಂದು ತಿಳಿಸಿದ್ದಾರೆ.
ಕತ್ರಿನಾ ಕೈಫ್ : ಕತ್ರಿನಾ ಕೈಫ್ ತನ್ನ ಚರ್ಮಕ್ಕಾಗಿ ನಿರಂತರವಾಗಿ ಐಸ್ ಡಿಪ್ಸ್ ಮತ್ತು ಐಸ್ ಮಸಾಜ್ ಮಾಡಿಕೊಳ್ಳುತ್ತಾರಂತೆ. ತಾಜಾ ಹೊಳೆಯುವ ಚರ್ಮಕ್ಕಾಗಿ ಪ್ರತಿದಿನ ಬೆಳಿಗ್ಗೆ ತಣ್ಣನೆಯ ಐಸ್ ನೀರಿನಲ್ಲಿ ಮುಖವನ್ನು ಡಿಪ್ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.
ತಮನ್ನಾ ಭಾಟಿಯಾ: ನಟಿ ತಮನ್ನಾ ಭಾಟಿಯಾ ತಮ್ಮ ಬೆಳಗಿನ ಚರ್ಮದ ಆರೈಕೆಯ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಮುಚ್ಚಿದ ಚರ್ಮದ ರಂಧ್ರಗಳನ್ನು ತೆರೆಯಲು ಮತ್ತು ಬೆಳಗ್ಗೆ ಮುಖದ ಊತವನ್ನು ಕಡಿಮೆ ಮಾಡಲು ಐಸ್ ಫೇಶಿಯಲ್‍ಗಳನ್ನು ಹೇಗೆ ಅಭ್ಯಾಸ ಮಾಡುತ್ತೇನೆ ಎಂಬುದನ್ನು ತೋರಿಸುವ ವಿಡಿಯೊವೊಂದನ್ನು ನಟಿ ಹಂಚಿಕೊಂಡಿದ್ದಾರೆ.
ಕೃತಿ ಸನೋನ್ : ಕೃತಿ ಸನೋನ್ ತನ್ನ ಚರ್ಮದ ಆರೈಕೆಯ ದಿನಚರಿಯನ್ನು ತನ್ನ ಸೋಶಿಯಲ್ ಮೀಡಿಯಾ ಪೇಜ್‍ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊದಲ್ಲಿ, ಕೃತಿ ತನ್ನ ಮೇಕಪ್‍ಗಿಂತ ಮೊದಲು ಚರ್ಮಕ್ಕೆ ಐಸ್ ಡಿಪ್ಪಿಂಗ್ ಮಾಡುತ್ತಾರೆ. ಐಸ್ ಡಿಪ್ಸ್ ಅವರ ಚರ್ಮದ ಆರೈಕೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ:ವಾಕರಿಕೆ ಸಮಸ್ಯೆ ಇದ್ದಾಗ ಯಾವ ಆಹಾರ ತಪ್ಪಿಸಬೇಕು? ಯಾವುದನ್ನು ಸೇವಿಸಬೇಕು?
ಇನ್ಯಾಕೆ ತಡ ನೀವು ಕೂಡ ಪ್ರತಿದಿನ ಐಸ್ ವಾಟರ್ ಫೇಶಿಯಲ್ ಮಾಡಿಕೊಂಡು ಬಾಲಿವುಡ್ ಸೆಲೆಬ್ರಿಟಗಳ ಹಾಗೇ ಹೊಳೆಯುವ ತ್ವಚೆಯನ್ನು ಪಡೆಯಿರಿ.