Thursday, 12th December 2024

ಮದ್ಯದ ಬಾಟಲಿಗಳಿದ್ದ ಟ್ರಕ್ ಪಲ್ಟಿ

ವಿಶಾಖಪಟ್ಟಣಂ: ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯಲ್ಲಿ ಮದ್ಯದ ಬಾಟಲಿಗಳಿದ್ದ ಕೇಸುಗಳನ್ನು ಸಾಗಿಸು ತ್ತಿದ್ದ ಟ್ರಕ್ ಪಲ್ಟಿಯಾದ ನಂತರ ಜನರು ಬಿಯರ್ ಬಾಟಲಿಗಳನ್ನು ಕದ್ದೊಯ್ದಿರುವ ಘಟನೆ ನಡೆದಿದೆ.
ಅನಕಾಪಲ್ಲಿ ಮತ್ತು ಬಯ್ಯವರಂ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ.
ಟ್ರಕ್ ಪಲ್ಟಿಯಾದ ಬಳಿಕ 200 ಬಿಯರ್ ಬಾಟಲಿಗಳ ಸಂಪೂರ್ಣ ಲೋಡ್ ನೆಲದ ಮೇಲೆ ಬಿದ್ದಿದ್ದರಿಂದ, ಸ್ಥಳೀ ಯರು ಲಾರಿ ಚಾಲಕ ಮತ್ತು ಕ್ಲೀನರ್ಗೆ ಸಹಾಯ ಮಾಡುವ ಬದಲು ಅವುಗಳನ್ನು ಕದಿಯುವಲ್ಲಿ ನಿರತರಾಗಿದ್ದರು. ಚಾಲಕ ಮತ್ತು ಕ್ಲೀನರ್ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಮದ್ಯ ಸಾಗಿಸುವ ಟ್ರಕ್ಗಳು ರಸ್ತೆ ಅಪಘಾತಕ್ಕೀಡಾದ ಬಳಿಕ ಅದರಲ್ಲಿದ್ದ ಮದ್ಯದ ಬಾಟಲಿಗಳನ್ನು ಕದಿಯುವ ಇಂತಹ ಘಟನೆಗಳು ರಾಜ್ಯದಲ್ಲಿ ಈ ಹಿಂದೆಯೂ ವರದಿಯಾಗಿವೆ.