ಕೋಲ್ಕತ್ತಾ: ಬಂಗಾಳಿ ಕಾದಂಬರಿಕಾರ ಮತ್ತು ಸಣ್ಣ ಕಥೆಗಾರ ಸಸ್ತಿಪಾದ ಚಟ್ಟೋಪಾಧ್ಯಾಯ ಅವರು ಹೌರಾದಲ್ಲಿ ನಿಧನರಾಗಿದ್ದಾರೆ.
ಪ್ರಸಿದ್ಧ ‘ಪಾಂಡವ್ ಗೊಯೆಂಡಾ'(ಐದು ಪತ್ತೆದಾರರು) ಸರಣಿಯ ಸೃಷ್ಟಿಕರ್ತ ಸಸ್ತಿಪಾದ ಚಟ್ಟೋಪಾಧ್ಯಾಯ ಅವರಿಗೆ 82 ವರ್ಷ ವಯಸ್ಸಾಗಿತ್ತು.
ಸಸ್ತಿಪಾದ ಚಟ್ಟೋಪಾಧ್ಯಾಯ ಅವರು ವೈದ್ಯಕೀಯ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಮಾರ್ಚ್ 9, 1941 ರಂದು ಹೌರಾ ಜಿಲ್ಲೆಯ ಖುರುತ್‌ನಲ್ಲಿ ಜನಿಸಿದ ಚಟ್ಟೋಪಾಧ್ಯಾಯ ಅವರು, 1961 ರಲ್ಲಿ ‘ದೈನಿಕ್ ಬಸುಮತಿ’ಯಲ್ಲಿ ಅವರ ಮೊದಲ ಲೇಖಕನ ‘ಕಾಮಾಖ್ಯ ಭ್ರಮನ್’ ಪ್ರಕಟವಾಗಿತ್ತು.