ಲಖನೌ: ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ಟೆಕ್ಕಿ ಅತುಲ್ ಸುಭಾಷ್ (Atul Subhash) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ ಪತ್ನಿ ನಿಖಿತಾ ಸಿಂಘಾನಿಯಾ(Nikita Singhania) ಆಕೆಯ ತಾಯಿ ನಿಶಾ ಮತ್ತು ಸಹೋದರ ಅನುರಾಗ್‌ನನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ(Bengaluru Techie). ಈಗಾಗಲೇ ಅಲಹಾಬಾದ್ ಕೋರ್ಟ್‌ನಲ್ಲಿ ಬಂಧಿತರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.
BREAKING: Atul Subhash’s wife Nikita Singhania, her mother & her brother arrested by Bengaluru Police from Gurugram and Prayagraj respectively. Remanded to judicial custody pic.twitter.com/1qa2WDMwoI
— Ghar Ke Kalesh (@gharkekalesh) December 15, 2024
ಉತ್ತರ ಪ್ರದೇಶದಲ್ಲಿ(Uttarpradesh) ಅತುಲ್ ಅತ್ತೆ ನಿಶಾ ಸಿಂಘಾನಿಯಾ ಮತ್ತು ಬಾಮೈದ ಅನುರಾಗ್ ಸಿಂಘಾನಿಯಾ ಅರೆಸ್ಟ್ ಆಗಿದ್ದು, ಕೆಲವೇ ಗಂಟೆಗಳಲ್ಲಿ ಹರಿಯಾಣದ ಗುರುಗ್ರಾಮದಲ್ಲಿ(Gurugram) ಅತುಲ್ ಪತ್ನಿ ನಿಖಿತಾ ಕೂಡ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾಳೆ. ಮೂವರನ್ನೂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ ಎಂಬ ಮಾಹಿತಿಯಿದೆ.
ಪತಿ ಅತುಲ್ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ನಿಖಿತಾ ಸಿಂಘಾನಿಯಾ ಪರಾರಿಯಾಗಿದ್ದರು. ಹುಡುಕಾಟ ಆರಂಭಿಸಿದ್ದ ಬೆಂಗಳೂರಿನ ಮಾರತ್ತಹಳ್ಳಿ ಪೊಲೀಸರು ಮೂರು ದಿನದ ಒಳಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದರು. ಇದೀಗ ಅತುಲ್ ಸುಭಾಷ್ ಆತ್ಮಹತ್ಯೆಯ ಪ್ರಕರಣದ ಆರೋಪದ ಮೇಲೆ ನಿಖಿತಾ, ನಿಶಾ ಮತ್ತು ಅನುರಾಗ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಹೆಂಡತಿ ಕಿರುಕುಳ ತಾಳಲಾರದೇ 24 ಪುಟಗಳ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದ ಟೆಕ್ಕಿ ಅತುಲ್ ಸುಭಾಷ್ ಸಹೋದರ ನೀಡಿದ್ದ ದೂರಿನ ಅನ್ವಯ, ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ನಾಲ್ವರ ವಿರುದ್ಧ ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೃತ ಅತುಲ್ ಸುಭಾಷ್ ಪತ್ನಿ ನಿಖಿತಾ ಸಿಂಘಾನಿಯಾ, ಆಕೆಯ ತಾಯಿ ನಿಶಾ ಸಿಂಘಾನಿಯಾ, ಸಹೋದರ ಅನುರಾಗ್ ಸಿಂಘಾನಿಯಾ ಹಾಗೂ ಸಂಬಂಧಿ ಸುಶೀಲ್ ಸಿಂಘಾನಿಯಾ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇನ್ನು ಅತುಲ್ ಸಾವಿಗೆ ನ್ಯಾಯ ಸಿಗಬೇಕು ಎಂಬ ಕೂಗು ದೇಶದೆಲ್ಲೆಡೆ ಕೇಳಿ ಬರುತ್ತಿದೆ.
ಯಾರು ಈ ನಿಖಿತಾ ಸಿಂಘಾನಿಯಾ?
ಮೃತ ಅತುಲ್ ಸುಭಾಷ್ ಅವರ ಪತ್ನಿ ನಿಖಿತಾ ಸಿಂಘಾನಿಯಾ ದೆಹಲಿ ಮೂಲದ ಎಐ ಇಂಜಿನಿಯರ್ ಕನ್ಸಲ್‌ಟೆಂಟ್ ಆಗಿದ್ದು, ದೇಶದ ಅತೀ ಪ್ರತಿಷ್ಠಿತ ಐಟಿ ಕಂಪನಿಯೊಂದರದಲ್ಲಿ ಕೆಲಸ ಮಾಡುತ್ತಿದ್ದಾರೆ. 2021ರಲ್ಲಿ ಸೀನಿಯರ್ ಕನ್ಸಲ್‌ಟೆಂಟ್ ಆಗಿ ಈ ಕಂಪನಿಗೆ ಸೇರಿದ್ದಾರೆ ಎಂಬ ಮಾಹಿತಿಯಿದೆ. ಬನಸ್ಥಲಿ ವಿದ್ಯಾಪೀಠದಿಂದ ಬಿ.ಟೆಕ್ ಪದವಿ ಪಡೆದುಕೊಂಡಿದ್ದು, ಜೈಪುರಿಯ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಿಂದ ಹಣಕಾಸು ವಿಷಯದಲ್ಲಿ ಎಂಬಿಎ ಪದವಿ ಪೂರ್ಣಗೊಳಿಸಿದ್ದಾಳೆ. ಪ್ರಾರಂಭದಲ್ಲಿ ಟೆಕ್ ಸಂಸ್ಥೆಯೊಂದರಲ್ಲಿ ಇಂಟರ್ನ್ ಆಗಿ ವೃತ್ತಿ ಜೀವನ ಆರಂಭಿಸಿದ್ದಳು. ನಂತರದಲ್ಲಿ ವಿವಿಧ ಟೆಕ್ ಹಾಗೂ ಫೈನಾನ್ಶಿಯಲ್ ಕಂಪೆನಿಗಳಲ್ಲಿ ಕೆಲಸ ಮಾಡಿರುವ ಅನುಭವ ನಿಖಿತಾ ಸಿಂಘಾನಿಯಾಗಿದೆ. 2019ರಲ್ಲಿ ಅತುಲ್ ಸುಭಾಷ್ ಅವರೊಂದಿಗೆ ವಿವಾಹವಾಗಿದ್ದು, 2021ರಲ್ಲಿ ಕೌಟುಂಬಿಕ ಕಲಹದಿಂದಾಗಿ ಪತಿಯನ್ನುತೊರೆದಿದ್ದರು. ದಂಪತಿಗೆ ಒಬ್ಬ ಮಗನಿದ್ದಾನೆ.
ಈ ಸುದ್ದಿಯನ್ನೂ ಓದಿ:Self Harming: ಹೆಂಡತಿ ಕಾಟಕ್ಕೆ ಮತ್ತೊಂದು ಬಲಿ, ಕಿರುಕುಳದಿಂದ ನೊಂದು ಪೊಲೀಸ್ ಆತ್ಮಹತ್ಯೆ