ನವದೆಹಲಿ: ದೇಶದ ಕ್ರಾಂತಿಕಾರ ಹೋರಾಟಗಾರ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ಭಗತ್ ಸಿಂಗ್ ಜನ್ಮದಿನ ಇಂದು.#BhagatSingh
ಸೆಪ್ಟಂಬರ್ ೨೮, 1907ರಂದು ಈಗಿನ ಪಾಕಿಸ್ತಾನದ ಲಾಯಲ್ಪುರ್ ಜಿಲ್ಲೆಯ ಜರಾನ್ ವಾಲಾ ತಾಲ್ಲೂಕಿನಲ್ಲಿರುವ ಬಂಗಾ ಹಳ್ಳಿಯಲ್ಲಿ ಭಗತ್ ಸಿಂಗ್ ಜನನವಾಯಿತು. ತಾಯಿ ಶ್ರೀಮತಿ ವಿದ್ಯಾವತಿ ಮತ್ತು ತಂದೆ ಕಿಶನ್ ಸಿಂಗ್. ಭಗತ್ ಸಿಂಗ್ ಅವರ 113ನೇ ಜಯಂತಿ ಹಿನ್ನೆಲೆಯಲ್ಲಿ ದೇಶದ ಜನನಾಯಕರು ಅವರನ್ನು ಸ್ಮರಿಸಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಭಾರತ ಮಾತೆಯ ಪುತ್ರನಿಗೆ ಕೋಟಿ ಕೋಟಿ ನಮನಗಳು ಎಂದಿದ್ದಾರೆ.
ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿ ಭಾರತೀಯರಿಗೆ ಯಾವತ್ತಿಗೂ ಭಗತ್ ಸಿಂಗ್ ಒಬ್ಬ ಸ್ಫೂರ್ತಿಯ ಸೆಲೆ. ತಮ್ಮ ಕ್ರಾಂತಿಕಾರಿ ವಿಚಾರಧಾರೆಗಳು, ತ್ಯಾಗ ಮನೋಭಾವ ಮತ್ತು ದೇಶದ ಯುವಜನತೆಯಲ್ಲಿ ಸ್ವಾತಂತ್ರ್ಯದ ಕಿಚ್ಚು ಹೆಚ್ಚಿಸಿದವರು. ಅವರು ಎಂದೆಂದಿಗೂ ನಮ್ಮ ಮನಸ್ಸಿನಲ್ಲಿ ಚಿರಸ್ಥಾಯಿ ಎಂದಿದ್ದಾರೆ.