Friday, 13th December 2024

ಹಿರಿಯ ಕಾಂಗ್ರೆಸ್ ನಾಯಕ ಭನ್ವರ್ ಲಾಲ್ ಶರ್ಮಾ ನಿಧನ

ರಾಜಸ್ಥಾನ: ರಾಜಸ್ಥಾನದ ಹಿರಿಯ ಕಾಂಗ್ರೆಸ್ ನಾಯಕ ಭನ್ವರ್ ಲಾಲ್ ಶರ್ಮಾ (77) ಜೈಪುರದಲ್ಲಿ ನಿಧನರಾಗಿದ್ದಾರೆ.

ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಆರೋಗ್ಯದಲ್ಲಿ ಅಸ್ವಸ್ಥತೆಯ ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ಶನಿವಾರ ಎಸ್‌ಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಪಾರ್ಥಿವ ಶರೀರವನ್ನು ಹನುಮಂತನಗರದಲ್ಲಿರುವ ಅವರ ನಿವಾಸಕ್ಕೆ ಕೊಂಡೊಯ್ಯ ಲಾಗಿದೆ. ವಿದ್ಯಾಧರ್ ನಗರದ ಬ್ರಾಹ್ಮಣ ಮಹಾಸಭಾ ಕಟ್ಟಡದಲ್ಲಿ ಜನರಿಗೆ ಗೌರವ ಸಲ್ಲಿಸಲು ಇಡಲಾಗುವುದು. ಸೋಮವಾರ ಸರ್ದರ್ಶಹರ್‌ನಲ್ಲಿ ಅಂತ್ಯಕ್ರಿಯೆ ನಡೆಯ ಲಿದೆ.

ಭನ್ವರ್ ಲಾಲ್ ಶರ್ಮಾ ಅವರು ಏಪ್ರಿಲ್ 17, 1945 ರಂದು ರಾಜಸ್ಥಾನದ ಚುರು ಜಿಲ್ಲೆಯ ಸರ್ದರ್ಶಹರ್‌ನ ಜೈತ್ಸಿಸರ್ ಗ್ರಾಮದಲ್ಲಿ ಸೇವಾಗ್ರಾಮ್ ಮತ್ತು ಪಾರ್ವತಿ ದೇವಿಗೆ ಜನಿಸಿ ದರು. 1962 ರಲ್ಲಿ ಅವರು ಜೈತ್ಸಿಸರ್ ಗ್ರಾಮ ಪಂಚಾಯತ್ನ ಸರಪಂಚ್ ಆದರು. ಅವರು 1962 ರಿಂದ 1982 ರವರೆಗೆ ಸರಪಂಚರಾಗಿದ್ದರು. 1982 ರಲ್ಲಿ ಅವರು ಸರ್ದರ್ಶಹರ್ ಪಂಚಾಯತ್ ಸಮಿತಿ ಮುಖ್ಯಸ್ಥ ರಾಗಿ ಆಯ್ಕೆಯಾದರು.

ಭನ್ವರ್ ಲಾಲ್ ಶರ್ಮಾ ಅವರ ನಿಧನಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಂತಾಪ ಸೂಚಿಸಿದ್ದಾರೆ.