Monday, 14th October 2024

ರಾಜಸ್ಥಾನ ಪ್ರವೇಶಿಸಿದ ಭಾರತ್ ಜೋಡೊ ಯಾತ್ರೆ

ಲಾವಾಡ್: ರಾಹುಲ್ ಗಾಂಧಿ ನೇತೃತ್ವದಲ್ಲಿ ಸಾಗುತ್ತಿರುವ ಭಾರತ್ ಜೋಡೊ ಯಾತ್ರೆ, ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವ ರಾಜಸ್ಥಾನದಲ್ಲಿ ಸೋಮವಾರ ಮುಂದುವರಿದಿದೆ.

ಮಧ್ಯಪ್ರದೇಶದಿಂದ ರಾಜಸ್ಥಾನಕ್ಕೆ ಭಾನುವಾರ ರಾತ್ರಿ ಪ್ರವೇಶಿಸಿರುವ ಭಾರತ್ ಜೋಡೊ ಯಾತ್ರೆ, ಸೋಮವಾರ ಬೆಳಿಗ್ಗೆ ಜಲಾವಾಡ್‌ನ ಕಾಳಿ ತಲಾಯ್ ಪ್ರದೇಶದಿಂದ ಪಾದ ಯಾತ್ರೆ ಆರಂಭಗೊಂಡಿತು.

ರಾಹುಲ್ ಗಾಂಧಿ ಅವರೊಂದಿಗೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹಲೋತ್, ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್, ಸಚಿವರು ಹಾಗೂ ಶಾಸಕರು ಸೇರಿದಂತೆ ಕಾಂಗ್ರೆಸ್ ನಾಯಕರು ಹೆಜ್ಜೆ ಹಾಕಿದರು.

ರಾಹುಲ್ ಗಾಂಧಿ ಪಾದಯಾತ್ರೆ ಹಿನ್ನೆಲೆಯಲ್ಲಿ ಗರಿಷ್ಠ ಭದ್ರತಾ ಒದಗಿಸಲಾಗಿದೆ. ರಾಹುಲ್ ಗಾಂಧಿ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಹಿಂಬಾಲಿಸಿದರು.

ಸೆಪ್ಟೆಂಬರ್ 7ರಂದು ಕನ್ಯಾಕುಮಾರಿಯಿಂದ ಆರಂಭವಾಗಿರುವ ಭಾರತ್ ಜೋಡೊ ಯಾತ್ರೆ 12 ರಾಜ್ಯಗಳಲ್ಲಿ ಒಟ್ಟು 3,750 ಕಿ.ಮೀ. ಕ್ರಮಿಸಲಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಯಾತ್ರೆ ಮುಕ್ತಾಯವಾಗಲಿದೆ.